ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಠದ ಆಸ್ತಿಯನ್ನು ಮಠಕ್ಕೆ ಬಿಡಿ:ಕೆಎಲ್ಇ ಸಂಸ್ಥೆಗೆ ಭಕ್ತರ ಒತ್ತಾಯ

ಹುಬ್ಬಳ್ಳಿ: ದೇಶದಲ್ಲಿ ತನ್ನದೇ ಕೀರ್ತಿಯನ್ನು ಹೊಂದಿರುವ ಕೆಎಲ್ಇ ಸಂಸ್ಥೆ ಮೂರುಸಾವಿರ ಮಠದ ಭೂಮಿಯನ್ನು ದಾನವಾಗಿ ಪಡೆದಿದ್ದು ಖಂಡನೀಯವಾಗಿದೆ ಕೂಡಲೇ ಕೆಎಲ್ಇ ಸಂಸ್ಥೆಯು ದಾನವಾಗಿ ಪಡೆದ ಭೂಮಿಯನ್ನು ಮಠಕ್ಕೆ ಮರಳಿಸುವಂತೆ ಮೂರುಸಾವಿರ ಮಠದ ಭಕ್ತರಾದ ನಿರಂಜನ ಹಿರೇಮಠ ಹಾಗೂ ಪೀರಾಜಿ ಖಂಡೇಕರ ಒತ್ತಾಯಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಮೂರುಸಾವಿರ ಮಠ ತುಂಬಾ ಆರ್ಥಿಕ ತೊಂದರೆಯಲ್ಲಿದೆ.ಮಠದಲ್ಲಿ ನಡೆಯುವ ನಿರಂತರ ದಾಸೋಹಕ್ಕೂ ಸಂಕಷ್ಟ ಪರಿಸ್ಥಿತಿ ಇದೆ‌.ಹೀಗಿರುವಾಗ ಕೆಎಲ್ಇ ಸಂಸ್ಥೆಯು ಮಠಕ್ಕೆ ಯಾವುದೇ ಸಹಾಯ ಹಸ್ತ ಚಾಚದೇ ತರಾತುರಿಯಲ್ಲಿ ಮಠದ ಆಸ್ತಿಯನ್ನು ದಾನವಾಗಿ ಪಡೆದಿದ್ದು,ಭಕ್ತರಲ್ಲಿ ಗೊಂದಲವನ್ನು ಸೃಷ್ಟಿಸಿದೆ ಎಂದರು.

ಕೆಎಲ್ಇ ಸಂಸ್ಥೆ ಹುಬ್ಬಳ್ಳಿಯಲ್ಲಿಯೇ ನೂರಾರು ಎಕರೆ ಆಸ್ತಿಯನ್ನು ಹೊಂದಿದೆ.ಹೀಗಿದ್ದರೂ ಮಠದ ಆಸ್ತಿಯನ್ನು ಏಕೆ ದಾನವಾಗಿ ಪಡೆದಿದೆ ಎಂಬುವುದು ಮಠದ ಭಕ್ತರಿಗೆ ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಕೆಎಲ್ಇ ಸಂಸ್ಥೆ ಈ ಗೊಂದಲಗಳಿಗೆ ತೆರೆ ಎಳೆಯಬೇಕಾದರೇ ಮಠದ ಆಸ್ತಿಯನ್ನು ಮಠಕ್ಕೆ ಮರಳಿಸಿ ಸಂಸ್ಥೆ ತನ್ನ ಹೆಸರನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

31/12/2020 01:02 pm

Cinque Terre

21.96 K

Cinque Terre

0

ಸಂಬಂಧಿತ ಸುದ್ದಿ