ನವಲಗುಂದ : ಇಂದು ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆ ಮತ ಎಣಿಕೆ ಇರೋದ್ರಿಂದ ನವಲಗುಂದದ ತಾಲೂಕು ಆಸ್ಪತ್ರೆಯ ಆವರಣ ಮಾರುಕಟ್ಟೆಯಾಗಿ ಬದಲಾಗಿತ್ತು.
ಹೌದು ಮತ ಎಣಿಕೆ ಹಿನ್ನಲೆ ಸಾವಿರಾರು ಜನರ ದಂಡು ಪಟ್ಟಣದ ಮಾಡೆಲ್ ಹೈಸ್ಕೂಲ್ ನ ಹೊರಗಡೆ ಜಮಾ ಆಗಿದ್ದು, ಸಾಕಷ್ಟು ಜನಸಂದಣಿ ಉಂಟಾಗಿತ್ತು, ಹೀಗಾಗಿ ಪಕ್ಕದಲ್ಲೇ ಇದ್ದ ತಾಲೂಕು ಆಸ್ಪತ್ರೆಯ ಅವರಣದಲ್ಲೇ ನುಗ್ಗಿದ ಜನರ ದಂಡು ಕೇಕೆ ಹಾಕುತ್ತಾ, ಆವರಣದಲ್ಲಿ ಗೊಂದಲ ಸೃಷ್ಟಿ ಆದಂತಾಗಿತ್ತು, ಇನ್ನು ಆಸ್ಪತ್ರೆಯಲ್ಲಿನ ರೋಗಿಗಳಿಗೂ ಇದು ಕಿರಿ ಕಿರಿಯಾಗಿತ್ತು ಎಂದರು ತಪ್ಪಿಲ್ಲಾ...
Kshetra Samachara
30/12/2020 09:29 pm