ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ

ಧಾರವಾಡ: ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಕೇವಲ ಎರಡು ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಯಾದವಾಡ ಗ್ರಾಮದ ಮಂಜುನಾಥ ಬಂಡೆಪ್ಪನವರ ಎಂಬ ಅಭ್ಯರ್ಥಿಯೇ ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದವರು. ಮಂಜುನಾಥ 218 ಮತಗಳನ್ನು ಪಡೆದರೆ, ಇವರ ಪ್ರತಿಸ್ಪರ್ಧಿ ಶೇಖಪ್ಪ ತಳವಾರ 216 ಮತಗಳನ್ನು ಪಡೆದರು.

ಯಾದವಾಡ ಗ್ರಾಮದ ಒಂದನೇ ವಾರ್ಡಿನಿಂದ ಮಂಜುನಾಥ ಸ್ಪರ್ಧೆ ಮಾಡಿದ್ದರು.

Edited By : Vijay Kumar
Kshetra Samachara

Kshetra Samachara

30/12/2020 04:27 pm

Cinque Terre

47.84 K

Cinque Terre

4

ಸಂಬಂಧಿತ ಸುದ್ದಿ