ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 2ನೇ ಹಂತದ ಮತದಾನ ನಾಳೆ ಇಂದು ಕತ್ತಲ ರಾತ್ರಿ ಹಣ ಹೆಂಡ

ಕುಂದಗೋಳ : ಧಾರಾವಾಡ ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಗೆ ಈಗಾಗಲೇ ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯಿತಿಗಳ ಮತಗಟ್ಟೆಗಳು ತಯಾರಾಗಿವೆ.

ಇಷ್ಟು ದಿನ ಮನೆಗೆ ತೆರಳಿ ಮತದಾರನ ಕೈ ಹಿಡಿದು ಮತ ಕೇಳಿದ ಅಭ್ಯರ್ಥಿಗಳು ಸದ್ದಿಲ್ಲದೆ ಗಪ್ ಆಗಿದ್ದು, ಹೊಸ ಆಮಿಷ್ ತೋರುವ ಪ್ಲ್ಯಾನ ಮಾಡಿದ್ದು ಇಂದು ಕತ್ತಲು ರಾತ್ರಿ ಗ್ರಾಮದ ಹಳ್ಳಿಗಳಲ್ಲಿ ವಿಜೃಂಭಿಸುವ ಸಾಧ್ಯತೆ ಇದೆ. ಹಣ, ಹೆಂಡದ ಆಮಿಷ ತೋರುವ ಮಾತುಗಳು ಕೇಳಿ ಬರುತ್ತಿದ್ದರು ಪುರಾವೆಗೆ ಮತದಾರ ತಯಾರಿಲ್ಲ‌.

ಹೊಸದಾಗಿ ವೋಟ್ ಹೊಂದಿದ ಯುವಕರಿಗೆ ಗುಂಡು ತುಂಡಗಳ ಪಾರ್ಟಿ ಯಾದ್ರೇ, ಮಹಿಳೆಯರಿಗೆ ಸೀರೆ, ವಯಸ್ಕರಿಗೆ ಹಣ ಹೆಂಡ ಹಂಚುವ ಕಸರತ್ತಿಗೆ ಕೆಲ ಹಳ್ಳಿಗಳಲ್ಲಿ ರಾತ್ರಿ ಅಭ್ಯರ್ಥಿಗಳು ವಿದ್ಯುತ್ ಕಟ್ ಮಾಡಿಸುವ ಆಲೋಚನೆ ಕೈ ಹಾಕಿರುವ ಗಾಸಿಪ್ ಸಹ ಕೇಳಿ ಬರುತ್ತಿವೆ.

ಇದೆಲ್ಲೇ ಒಂದಡೇಯಾದ್ರೇ ಜಾತಿ ಪ್ರತಿಷ್ಠೇ ಸಹ ಗ್ರಾಮ ಪಂಚಾಯಿತಿ ಕಣದಲ್ಲಿ ಸಖತ್ ಸೌಂಡ್ ಮಾಡಿದ್ದು, ಮೀಸಲು ಕ್ಷೇತ್ರ ಹೊರತುಪಡಿಸಿ ಸಾಮಾನ್ಯ ಹಾಗೂ ಇತರ ವರ್ಗಗಳಲ್ಲಿ ಆಂತರಿಕವಾದ ಪಕ್ಷಗಳ ಪ್ರಾಬಲ್ಯದ ಬದಲಾಗಿ ಜಾತಿಗೆ ಅಂಟಿಕೊಂಡು ರಾಜಕೀಯ ಮಾಡುತ್ತಿರುವುದು ಖಾತ್ರೀಯಾಗಿದೆ. ಈ ಸಾಲಿನಲ್ಲಿ ಅಭ್ಯರ್ಥಿಗಳಿಗೆ ವಿದ್ಯಾವಂತ ಯುವಕರು ಗಮನಕ್ಕೆ ಬಾರದೇ ಇರೋದು ವಿಪರ್ಯಾಸ.

ಒಟ್ಟಾರೆ ಮಿನಿ ಸಮರ ಎಂದೇ ಗುರುತಿಸಿಕೊಂಡಿರುವ ಗ್ರಾಪಂ ಗದ್ದುಗೆ ಏರಲು ಮಾಜಿ ಗ್ರಾಪಂ ಸದಸ್ಯರ ಜೊತೆ ಅವರ ಕೈ ಯಲ್ಲಿದ್ದ ಪಂಚಾಯಿತಿ ಮೇಟ್ ಅವರಿಗೆ ಸ್ಪರ್ಧಿಯಾಗಿರೋದು ಜನರನ್ನು ಹುಬ್ಬೆರಿಸಿದ್ದು, ಪಂಚಾಯಿತಿ ಗದ್ದುಗೆಯ ಲಾಭ ಗಳಿಕೆ ಮಾತು ಜೋರಾಗಿದೆ. ಹಳ್ಳಿಗಳಲ್ಲಿ ಚುನಾವಣೆಗೆ ಕಾನೂನು ಖಾಕಿ, ನೀತಿ ಸಂಹಿತೆಯ ಭಯವೇ ಇಲ್ಲದಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

26/12/2020 05:34 pm

Cinque Terre

77.55 K

Cinque Terre

3

ಸಂಬಂಧಿತ ಸುದ್ದಿ