ನವಲಗುಂದ : ತಾಲೂಕಿನಲ್ಲಿ ಬಿಟ್ಟುಬಿಡದೆ ಸುರಿದ ಮಳೆಗೆ ಹಂದಿಗನಹಳ್ಳ ಪ್ರವಾಹ ಬಂದು ಭೋಗಾನೂರ ಹಾಗೂ ಖನ್ನೂರ ಗ್ರಾಮಗಳು ಸಂಪೂರ್ಣ ನಲುಗಿ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಗ್ರಾಮಗಳಿಗೆ ಭೇಟಿ ನೀಡಿ, ರೈತರ ಬೆಳೆಹಾನಿ ಹಾಗೂ ಬಿದ್ದ ಮನೆಗಳನ್ನು ವೀಕ್ಷಿಸಿ, ಸರ್ಕಾರಕ್ಕೆ ಮನವಿ ಮಾಡಿ, ಪರಿಹಾರ ದೊರಕಿಸಿಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಜನರು ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳನ್ನು ಕಟ್ಟಲು ಜಾಗವಿಲ್ಲ, ವಾಸಿಸಲು ಸೂರಿಲ್ಲದೆ ಜನ ಕಣ್ಣೀರು ಹಾಕುತ್ತಿದ್ದಾರೆ. 50ಕ್ಕಿಂತ ಹೆಚ್ಚು ಮನೆಗಳು ಬಿದ್ದಿದ್ದು, ಸಾರ್ವಜನಿಕರು ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ವಿವಿಧ ಕಡೆ ತಗಡಿನ ಶಡ್ ಗಳಲ್ಲಿ ವಾಸಿಸುತ್ತಿದ್ದಾರೆ. ನನಗೆ ನನ್ನ ಆರೋಗ್ಯಕ್ಕಿಂತ ನನ್ನ ಕ್ಷೇತ್ರದ ಜನರ ಆರೋಗ್ಯ ಮುಖ್ಯ ಎಂದು ಸಣ್ಣ ಮಕ್ಕಳ ಹಾಗೂ ಹಿರಿಯರ ಕಣ್ಣೀರಿನ ಕಷ್ಟವನ್ನು ನೋಡಿ ಕೋನರಡ್ಡಿ ಅವರು ಭಾವುಕರಾದರು.
ಕೆಲ ವ್ಯಕ್ತಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ರಾಜಕೀಯ ಮಾಡುವುದು ಅವಶ್ಯಕತೆ ಇಲ್ಲ. ಜನರ ಕಷ್ಟಕ್ಕೆ ಸ್ಪಂದಿಸಿ, ಅವರ ನೋವಿನಲ್ಲಿ ನಾನು ಒಬ್ಬ ಎನ್ನುವ ರೀತಿಯಲ್ಲಿ ನನ್ನ ಹೋರಾಟದ ಸೇವೆ ಮಾಡುತ್ತೇನೆ. ಹೊರತು ರಾಜಕೀಯ ಮಾಡಲು ಸೂಕ್ತ ಸಮಯವಲ್ಲ ಎಂಬುವುದು ನನಗೆ ಅರಿವಿಗಿದೆ ಕೋನರಡ್ಡಿ ಹೇಳಿದರು.
Kshetra Samachara
14/09/2022 08:00 am