ಧಾರವಾಡ: ಕೇಂದ್ರ ಸರ್ಕಾರದ ವಿರುದ್ಧ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ಗೆ ಧಾರವಾಡದಲ್ಲಿಯೂ ಬೆಂಬಲ ವ್ಯಕ್ತವಾಗುತ್ತಿದೆ.
ಹಲವು ಸಂಘಟನೆಗಳು ಸೇರಿ ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸಿವೆ.
ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲು ಸಂಘಟನೆಗಳು ತೀರ್ಮಾನಿಸಿವೆ. ಕನ್ನಡಪರ, ರೈತಪರ, ದಲಿತ, ವ್ಯಾಪಾರಸ್ಥರ ಸಂಘ ಸೇರಿ ಒಟ್ಟು 9 ಸಂಘಟನೆಗಳು ಸಭೆ ಸೇರಿ ಧಾರವಾಡದಲ್ಲಿ ಬಂದ್ಗೆ ಬೆಂಬಲ ಸೂಚಿಸಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ನೂತನ ಎಪಿಎಂಸಿ ಕಾಯ್ದೆ ವಿರುದ್ಧ ರೈತರು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ.
ಅದಕ್ಕೆ ಧಾರವಾಡದಲ್ಲಿಯೂ ಸಹ ಅನೇಕ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿ ಸಭೆ ನಡೆಸಿ, ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
Kshetra Samachara
27/09/2020 05:54 pm