ನವಲಗುಂದ : ತಾಲೂಕಿನ ಮೊರಬ ಗ್ರಾಮದ ಮಾರುತಿ ಕುಸ್ತಿ ಪೈಲ್ವಾನರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದಿವಂಗತ ಸೈಯ್ಯದ್ ಪೈಲ್ವಾನರು ಇವರ ಸ್ಮರಣಾರ್ಥ ಮೊರಬ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಭಾರಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾಗವಹಿಸಿ, ಪಂದ್ಯಾವಳಿಯಲ್ಲಿ ಭಾಗವಹಿಸಿದ ಪೈಲ್ವಾನರಿಗೆ ಶುಭ ಕೋರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಮಂಡಿಸಿದ 2022-23 ನೇ ಸಾಲಿನ 'ರಾಜ್ಯ ಬಜೆಟ್” ನಲ್ಲಿ ನಮ್ಮ ಭಾಗದ ರೈತರ ಬಹುದಿನಗಳ ಕನಸಾದ ರೈತರ ಜೀವನಾಡಿ ತುಪ್ಪರಿಹಳ್ಳದ ಯೋಜನೆಗೆ 312 ಕೋಟಿ ರೂಪಾಯಿಗಳ ಮಂಜೂರಾತಿ ನೀಡಿದ ಹಿನ್ನೆಲೆಯಲ್ಲಿ ತುಪ್ಪರಿಹಳ್ಳದ ಹೂಳು ತೆಗೆಯುವ ಕಾಮಗಾರಿ ಕುರಿತು ಮೊರಬ ಗ್ರಾಮದಲ್ಲಿ ಸಚಿವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.
ಇದೆ ಸಂಧರ್ಭದಲ್ಲಿ ಗ್ರಾಮದಲ್ಲಿ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.
Kshetra Samachara
28/03/2022 06:01 pm