ಹುಬ್ಬಳ್ಳಿ: ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ ಎದುರಿಸಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬೆಳಗ್ಗೆ 7:30 ಕ್ಕೆ ಬಂದಿಳಿಯಬೇಕಿದ್ದ ವಿಮಾನಕ್ಕೆ ಹುಬ್ಬಳ್ಳಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಹೀಗಾಗಿ ಮೂರು ಸುತ್ತು ಹೊಡೆದರೂ ಲ್ಯಾಂಡಿಂಗ್ ಸಾಧ್ಯವಾಗದ ಹಿನ್ನೆಲೆಯಲ್ಲಿ 10 ನಿಮಿಷ ಆಕಾಶದಲ್ಲಿ ಹಾರಾಟ ನಡೆಸಿತ್ತು. ಇಂಡಿಗೊ ಸಂಸ್ಥೆಗೆ ಸೇರಿದ 6E7227 ವಿಮಾನ ಇದಾಗಿದೆ.
ದಟ್ಟ ಮಂಜಿನಿಂದ ಕ್ಲಿಯರನ್ಸ್ ಸಿಗದೇ 26 ನಿಮಿಷದ ಬಳಿಕ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದ್ದು, ಸದ್ಯ ಹುಬ್ಬಳ್ಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿದ್ದಾರೆ.
Kshetra Samachara
10/12/2021 09:08 am