ಧಾರವಾಡ: ಧಾರವಾಡ ಗ್ರಾಮೀಣ ಭಾಗದಲ್ಲಿ ಡಿಜೆ ಹಚ್ಚುವ ಗೊಂದಲಕ್ಕೆ ಶಾಸಕ ಅಮೃತ ದೇಸಾಯಿ ತೆರೆ ಎಳೆದಿದ್ದಾರೆ.
ಗಣೇಶ ಹಬ್ಬದಂದು ಡಿಜೆ ಇಲ್ಲ ಅಂದ್ರೆ ಹೇಗೆ? ಡಿಜೆ ಹಚ್ಚಲು ಅನುಮತಿ ಕೊಡಬೇಕು ಎಂದು ಗ್ರಾಮಾಂತರ ಭಾಗದ ಅನೇಕ ಯುವಕ ಮಂಡಳಿಯವರು ಪೊಲೀಸ್ ಇಲಾಖೆಗೆ ದುಂಬಾಲು ಬಿದ್ದಿದ್ದರು. ಆದರೆ, ಪೊಲೀಸ್ ಇಲಾಖೆ ಮಾತ್ರ ಈ ಬಾರಿ ಡಿಜೆಗೆ ಪರವಾನಿಗಿ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಅಲ್ಲದೇ ಯುವಕರು ಶಾಸಕ ಅಮೃತ ದೇಸಾಯಿ ಅವರಿಗೂ ಮನವಿ ಮಾಡಿದ್ದರು.
ನಿನ್ನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಅಮೃತ ದೇಸಾಯಿ ಅವರು, ಗಣೇಶ ಹಬ್ಬ ದೊಡ್ಡ ಹಬ್ಬ. ಡಿಜೆ ಹಚ್ಚಿ ಸಂಭ್ರಮಿಸಿ. ಶಾಂತಿ ಹಾಗೂ ಸೌಹಾರ್ಧತೆಯಿಂದ ಹಬ್ಬ ಆಚರಿಸಿ. ರಾತ್ರಿ 10 ಗಂಟೆಯೊಳಗೆ ಡಿಜೆ ಬಂದ್ ಮಾಡಿ. ಈ ಸಂಬಂಧ ನಾವೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದು ಪರವಾನಿಗಿ ನೀಡಿದರು.
ಶಾಸಕರ ಈ ಹೇಳಿಕೆಯಿಂದ ಸಮಾವೇಶದಲ್ಲಿ ಸೇರಿದ್ದ ಯುವಕರು ಶಿಳ್ಳೆ ಹಾಗೂ ಕೇಕೆ ಹೊಡೆದು ಸಂಭ್ರಮಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/09/2022 09:13 pm