ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವೀರ ಸಾವರ್ಕರ್‌ ಫೋಟೋ ವಿವಾದದ ಮಧ್ಯೆಯೂ ನರೇಂದ್ರದಲ್ಲಿ ಅದ್ಧೂರಿ ಮೆರವಣಿಗೆ

ಧಾರವಾಡ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ವಿವಾದ ಇನ್ನೂ ಹಸಿರಿರುವಾಗಲೇ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ.

101 ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮೆರಗು ಹೆಚ್ಚಿಸಿದರಲ್ಲದೇ ಈ ಮೆರವಣಿಗೆಗೆ ಶಾಸಕ ಅಮೃತ ದೇಸಾಯಿ ಅವರೇ ಚಾಲನೆ ನೀಡಿದರು. ಚಕ್ಕಡಿಯಲ್ಲಿ ಸಾವರ್ಕರ್ ಭಾವಚಿತ್ರವನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅಲ್ಲದೇ ಸಾವರ್ಕರ್ ಪರ ಘೋಷಣೆಗಳನ್ನು ಕೂಗಿ ಸಾವರ್ಕರ್ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲಾಯಿತು.

Edited By :
Kshetra Samachara

Kshetra Samachara

24/08/2022 12:18 pm

Cinque Terre

15.6 K

Cinque Terre

1

ಸಂಬಂಧಿತ ಸುದ್ದಿ