ಧಾರವಾಡ: ಜಾಮಿಯಾ ಮಸೀದಿಯಲ್ಲಿ ದೇವಸ್ಥಾನ ಇತ್ತು ಎಂಬುದು ಗೊತ್ತಾಗಿದೆ. ಮಸೀದಿಯಲ್ಲಿ ಸಿಕ್ಕ ಪುಸ್ತಕದಲ್ಲಿ ಮಸೀದಿ ಇದ್ದ ಜಾಗದಲ್ಲಿ ದೇವಸ್ಥಾನ ಇತ್ತು ಎಂಬುದು ಗೊತ್ತಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಅಲ್ಲಿ ನಾಗರ ಚಿಹ್ನೆ ಇದೆ, ಕಲ್ಯಾಣಿ, ಗರುಡ ಚಿಹ್ನೆ ಇದೆ. ಇದರ ಜೊತೆಗೆ ಟಿಪ್ಪು ಸುಲ್ತಾನನೇ ಅದನ್ನು ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ. ಅದು 70 ವರ್ಷದ ಹಿಂದೆ ಪ್ರಕಟವಾದ ಪುಸ್ತಕ. ಅದರಲ್ಲಿ ಎಲ್ಲವೂ ಕೂಡ ದಾಖಲಾಗಿದೆ. ನಾರಾಯಣನ ಮೂರ್ತಿ ಕತ್ತರಿಸಿ ಅದನ್ನು ನೀರಿನ ಗುಂಡಿಯಲ್ಲಿ ಎಸೆದಿದ್ದಾರೆ. ಅಲ್ಲದೇ ಅಲ್ಲಿ 70 ವರ್ಷದ ಹಿಂದೆ ಪ್ರಕಟವಾದ ಆಂಜನೇಯನ ದೇವಸ್ಥಾನದ ಚಿತ್ರ ಇದೆ. ಇದೆಲ್ಲವೂ ದಾಖಲೆಯಾಗಿದೆ ಸರ್ಕಾರಕ್ಕೆ ಮತ್ತ್ಯಾವ ದಾಖಲೆ ಬೇಕು ಎಂದು ಪ್ರಶ್ನಿಸಿದ್ದಾರೆ.
ವಾದ, ವಿವಾದ ಮಾಡುವ ಅವಶ್ಯಕತೆ ಇಲ್ಲ. 7 ಕೊಪ್ಪರಿಗೆ ಚಿನ್ನಾಭರಣ ಕದ್ದು ಅದರಿಂದಲೇ ಅಲ್ಲಿ ಮಸೀದಿ ಕಟ್ಟಲಾಗಿದೆ. ವಿಜಯನಗರದ ತಿಮ್ಮಣ್ಣ ನಾಯಕ ಎಂಬಾತ ಅದನ್ನು ಕಟ್ಟಿದ್ದ ಎಂಬ ಉಲ್ಲೇಖ ಇದೆ. ಕೂಡಲೇ ಈ ವಕ್ಫ ಬೋರ್ಡ್‌ನ್ನು ರದ್ದು ಮಾಡಬೇಕು. ಅದೊಂದು ಬೋಗಸ್ ಬೋರ್ಡ್ ಆಗಿದೆ. ಮೊದಲು ಮದರಸಾದಲ್ಲಿ ಓದುತ್ತಿರುವವರನ್ನು ಹೊರಗೆ ಹಾಕಬೇಕು. ಕೂಡಲೇ ಮಸೀದಿ ತೆರವು ಮಾಡಬೇಕು. ಪ್ರತಿ ಶನಿವಾರ ಅಲ್ಲಿ ಆಂಜನೇಯ ದೇವರ ಪೂಜೆಗೆ ಅವಕಾಶ ಕೊಡಬೇಕು. ದಾಖಲೆ ಸಮೇತ ಅವರನ್ನು ಹೊರಗೆ ಹಾಕಬೇಕು ಎಂಬುದೇ ನಮ್ಮ ಬೇಡಿಕೆ ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/06/2022 09:55 pm