ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮುಸ್ಲಿಂ ಸಮಾಜ ಹಠಕ್ಕೆ ಬೀಳದೇ ಅನುಭವ ಮಂಟಪ ಬಿಟ್ಟು ಕೊಡಬೇಕು; ಮುತಾಲಿಕ್

ಧಾರವಾಡ: ಬಸವ ಕಲ್ಯಾಣ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅನುಭವ ಮಂಟಪ. ಆದರೆ ಅದನ್ನು ನಿಜಾಮನ ಕಾಲದಲ್ಲಿ ಅತಿಕ್ರಮಣ ಮಾಡಿ ಪೀರ್ ಪಾಷಾ ಬಂಗ್ಲೆ ಮಾಡಲಾಗಿದೆ. ಮುಸ್ಲಿಂ ಸಮಾಜ ಹಠಕ್ಕೆ ಬೀಳದೇ ಅನುಭವ ಮಂಟಪವನ್ನು ಬಿಟ್ಟು ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಇವತ್ತು ಸರ್ಕಾರ ಬಸವಕಲ್ಯಾಣದಲ್ಲಿ ಬೇರೆ ಕಡೆ ಅನುಭವ ಮಂಟಪ ಮಾಡುವ ನಿರ್ಧಾರ ಕೈಗೊಂಡಿದ್ದು ಸರಿಯೇ. ಆದರೆ, ಈಗಿರುವ ಮೂಲ ಸ್ಥಾನ ಅದು ಭಕ್ತಿಯ ಸ್ಥಳ. 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಸ್ಥಳ. ಆ ಜಾಗವನ್ನು ಬಿಟ್ಟು ಕೊಡಬೇಕು ಎಂದರು.

ನಿಜಾಮನ ಕಾಲದಲ್ಲಿ ಅನುಭವ ಮಂಟಪವನ್ನು ಅತಿಕ್ರಮಣ ಮಾಡಲಾಗಿತ್ತು. ಅದಕ್ಕೆ ದಾಖಲೆಗಳಿವೆ. ಹಿಂದೂ ಧರ್ಮದ ನಿರ್ಲಕ್ಷದಿಂದ ಅನುಭವ ಮಂಟಪ ಇನ್ನೊಬ್ಬರ ಪಾಲಾಗಿದೆ. ಸರ್ಕಾರ ಅದನ್ನು ವಾಪಸ್ ಪಡೆದುಕೊಳ್ಳಬೇಕು. ಮುಸ್ಲಿಂ ಸಮಾಜ ಅದನ್ನು ಶಾಂತ ರೀತಿಯಿಂದ ಬಿಟ್ಟುಕೊಡಬೇಕು. ಇಲ್ಲ ಎಂದರೆ ಗಲಭೆಗಳು ಪ್ರಾರಂಭವಾಗುತ್ತವೆ. ವೀರಶೈವ ಲಿಂಗಾಯತ ಪ್ರತಿನಿಧಿಗಳು ಇದರ ಬಗ್ಗೆ ಬಾಯಿ ಬಿಡಬೇಕು. ಜೂನ್ 12 ರಂದು ನಮ್ಮ ನಡೆ ಬಸವಕಲ್ಯಾಣದ ಕಡೆ ಎಂದು ಕರೆ ನೀಡಲಾಗಿದೆ. ಬಹಳಷ್ಟು ಜನ ಸಾಧು, ಸಂತರು ಅಲ್ಲಿಗೆ ಬರುತ್ತಾರೆ. ಅದಕ್ಕೆ ನಾವೂ ಬೆಂಬಲ ಕೊಡಲಿದ್ದೇವೆ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/05/2022 06:43 pm

Cinque Terre

51.34 K

Cinque Terre

21

ಸಂಬಂಧಿತ ಸುದ್ದಿ