ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರ್‌ಎಸ್‌ಎಸ್ ಬಗ್ಗೆ ಪದೇ ಪದೇ ಅಪಹಾಸ್ಯದ ಹೇಳಿಕೆ ಕೊಟ್ಟು ತಮ್ಮ ಬುದ್ಧಿ ಭ್ರಮಣೆಯಾಗಿದೆ ಎಂಬುದನ್ನು ತೋರಿಸುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿರುವ ಅವರು, ಆರ್‌ಎಸ್‌ಎಸ್‌ನವರು ಆರ್ಯರು, ದ್ರಾವಿಡರು ಎಂದು ಸಿದ್ದರಾಮಯ್ಯವರು ಹೇಳಿಕೆ ಕೊಟ್ಟಿದ್ದಾರೆ. ಈ ರೀತಿ ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ. ಈ ರೀತಿ ಹೇಳಿಕೆ ಕೊಟ್ಟು ಸಿದ್ದರಾಮಯ್ಯನವರು ತಮ್ಮ ವ್ಯಕ್ತಿತ್ವ ತೋರಿಸಿಕೊಟ್ಟಿದ್ದು ಸರಿಯಲ್ಲ ಎಂದರು.
ಆರ್‌ಎಸ್‌ಎಸ್ 96 ವರ್ಷಗಳಿಂದ ಈ ದೇಶದಲ್ಲಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಕೆಲಸ ಮಾಡುತ್ತಿದೆ. ಇನ್ನು ಮುಂದೆಯೂ ನಿರಂತರವಾಗಿ ಕೆಲಸ ಮಾಡುತ್ತದೆ. ಇಂತಹ ಸಂಘಟನೆಯನ್ನು ನೀವು ಭಾರತೀಯರಲ್ಲ ಆರ್ಯರು ಎಂದು ಹೇಳಿಕೆ ನೀಡಿರುವುದು ಅಪಹಾಸ್ಯದ ಸಂಗತಿ ಎಂದರು.
ಆರ್‌ಎಸ್‌ಎಸ್‌ನಲ್ಲಿ ಕೋಟ್ಯಂತರ ಜನ ಕಾರ್ಯಕರ್ತರಿದ್ದಾರೆ. ಸಂಸ್ಕಾರ ಪಡೆದು ದೇಶಕ್ಕೆ ಕೆಲಸ ಮಾಡುವ ಜನ ಇದರಲ್ಲಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆ ಮೂರ್ಖತನದ ಹೇಳಿಕೆ. ಕಾಂಗ್ರೆಸ್‌ನವರು ತಮ್ಮ ಪಕ್ಷದ ಸ್ವಾರ್ಥಕ್ಕಾಗಿ ಕೆಲಸ ಮಾಡಿದ್ದರಿಂದ ಇಂದು ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಬೇಕು. ಸಿದ್ದರಾಮಯ್ಯನವರು ಏನಾದರೊಂದು ಹೇಳಿಕೆ ಕೊಟ್ಟು ಗೊಂದಲ ಸೃಷ್ಠಿಸಬಾರದು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/05/2022 06:27 pm