ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಾಜಿ ಪೌರಾಡಳಿತ ಸಚಿವ ದಿವಂಗತ ಸಿ.ಎಸ್ ಶಿವಳ್ಳಿಯವರ ಸ್ಮರಣಾರ್ಥ ಅಮರಶಿವ ವೇದಿಕೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಿದವು.
ಸದಾ ಸಮಾಜದ ಏಳ್ಗೆ ಬಯಸುತ್ತಿದ್ದ ದಿ.ಮಾಜಿ ಸಚಿವ ಸಿ.ಎಸ್ ಶಿವಳ್ಳಿ ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತಾ ಸಮಾಜದ ಮುನ್ನೆಲೆಗೆ ಬಂದವರು. ಅದರಂತೆ ಶಾಸಕಿ ಕುಸುಮಾವತಿ ಶಿವಳ್ಳಿ ಸಹ ಇಂದು ಶಿವಳ್ಳಿ ಕುಟುಂಬಸ್ಥರ ನೇತೃತ್ವದಲ್ಲಿ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಯಶಸ್ವಿಯಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಕೈಗೊಂಡರು.
ಕುಂದಗೋಳ ತಾಲೂಕ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿ ವಧು-ವರರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ಜೋಡಿಯಾಗಿ ವಿವಾಹವಾದರು. ಮದುವೆಯಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ ಪುತ್ರ ಅಮರಶಿವ ಪುತ್ರಿಯರು ದಿ.ಸಿ.ಎಸ್.ಶಿವಳ್ಳಿ ಸರ್ವ ಸಹೋದರರು ಭಾಗವಹಿಸಿ ವಧು-ವರರಿಗೆ ತಾಳಿ, ಕಾಲುಂಗುರ, ಬಟ್ಟೆ ಬಾಸಿಂಗ ವಿತರಿಸಿದರು.
Kshetra Samachara
20/05/2022 10:39 pm