ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ತತ್ವಜ್ಞಾನದ ಭಂಡಾರ, ಲೋಕಕ್ಕೆ ಬೆಳಕು ಕೊಡುವ ಶಕ್ತಿ ಇಲ್ಲಿದೆ; ಸಿಎಂ ಬೊಮ್ಮಯಿ

ಧಾರವಾಡ: ಧಾರವಾಡ ತತ್ವಜ್ಞಾನದ ಭಂಡಾರ. ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಇಲ್ಲಿದೆ. ಇತಿಹಾಸ ತೆರೆದು ನೋಡಿ, ಈ ಊರಿಗೆ ಅಂತಹ ಒಂದು ಪರಂಪರೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಧಾರವಾಡದಲ್ಲಿ ಚೆನ್ನಬಸವೇಶ್ವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅವರು, ಕಲೆ, ಸಾಹಿತ್ಯ, ವಿದ್ಯೆ, ಸಂಗೀತ ಎಲ್ಲವನ್ನೂ ಈ ನೆಲ ಹೊಂದಿದೆ. ಸಂಗೀತ ಮತ್ತು ಸಾಹಿತ್ಯ ಒಂದೇ ಕಡೆ ಇರುವುದು ಅಪರೂಪ. ಅದು ಧಾರವಾಡದಲ್ಲಿ ಮಾತ್ರ ಇದೆ. ಇಲ್ಲಿಂದಲೇ ಅನೇಕ ಸಾಹಿತಿ, ಸಂಗೀತಗಾರರು ಪ್ರಸಿದ್ಧರಾಗಿದ್ದಾರೆ. ಅದು ಧಾರವಾಡದ ಮಣ್ಣಿನ ಗುಣಧರ್ಮವಾಗಿದೆ ಎಂದರು.

ಬಸವಣ್ಣನವರ ವಿಚಾರಗಳು ಸರ್ವಕಾಲಕ್ಕೂ ಸತ್ಯ, ಬಸವ ಪರಂಪರೆಯಲ್ಲಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚೆನ್ನಬಸವೇಶ್ವರರು ಇತರ ವಚನಕಾರರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು. ಕಟು ಸತ್ಯಗಳನ್ನು ಚೆನ್ನಬಸವಣ್ಣ ಹೇಳಿದ್ದಾರೆ. ಬಸವಣ್ಣ ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳು, ಲಿಂಗಬೇಧ ವಿರುದ್ಧ ಹೋರಾಡಿದ್ದರು. ಅವರು ಪ್ರಸ್ತುತ ಅಂತಾದ್ರೆ ಇವೆಲ್ಲವೂ ಇನ್ನೂ ಇವೆ ಅಂತ ಅರ್ಥ 900 ವರ್ಷವಾದರೂ ಅಸಮಾನತೆ, ಮೂಢನಂಬಿಕೆ ಇನ್ನೂ ಇದೆ. ಇದನ್ನು ನೋಡಿದಾಗ ಬಸವಾಭಿಮಾನಿಗಳು ವಿಚಾರ ಮಾಡಬೇಕಿದೆ. 108 ಜನ ವಚನಕಾರರ ವಿಚಾರ ಪೂರ್ಣ ಪ್ರಮಾಣ ಜಾರಿಗೆ ತರಬೇಕಿದೆ. ಬಸವ ಪಥವೇ ನನ್ನ ಪಥ ಈ ಮಾದರಿಯಲ್ಲೇ ನಾನು ಕೆಲಸ ಮಾಡುತ್ತಿರುವೆ ಎಂದು ಹೇಳಿದರು.

Edited By :
Kshetra Samachara

Kshetra Samachara

15/05/2022 06:37 pm

Cinque Terre

23.77 K

Cinque Terre

0

ಸಂಬಂಧಿತ ಸುದ್ದಿ