ಹುಬ್ಬಳ್ಳಿ: ಮೊನ್ನೆ ಶನಿವಾರ ನಡೆದ ಕಲ್ಲು ತೂರಾಟದ ಸಂದರ್ಭದಲ್ಲಿ ದಿಡ್ಡಿ ಹನುಮಂತ ದೇವರ ದೇವಸ್ಥಾನದ ಮೇಲೆಯೂ ಗಲಭೆಕೋರರು ಕಲ್ಲು ತೂರಾಟ ನಡೆಸಿ ಹಾನಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ವಜೀಮ್ ಹನುಮಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಶಾಂತಿ ನೆಲೆಸುವಂತೆ ಕೋರಿಕೊಂಡಿದ್ದಾರೆ.
ಗಲಾಟೆ ನಡೆದ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿಗೆ ಆಗಮಿಸಿದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು ದಿಡ್ಡಿ ಹನುಮಂತ ದೇವರಿಗೆ ಕೈ ಮುಗಿದು ಈ ಅಶಾಂತಿಯನ್ನು ಹೋಗಲಾಡಿಸು ಶಾಂತಿ ನೆಲೆಸುವಂತೆ ಮಾಡು ದಿನವೂ ನಿನ್ನ ಪೂಜೆ ನಡೆಯುವಂತೆ ಮಾಡುತ್ತೇವೆ ಎಂದು ಪ್ರಾರ್ಥನೆ ಸಲ್ಲಿಸಿದರು.
ಇನ್ನೂ ಗಲಾಟೆಯಲ್ಲಿ ಗಾಯಗೊಂಡ ಪೊಲೀಸರ ಆರೋಗ್ಯದ ವಿಚಾರಣೆಯನ್ನು ಕೂಡ ಮಾಡಿದ್ದು, ಅಶಾಂತಿ ಹೋಗಲಾಡಿಸಿ ಶಾಂತಿ ನೆಲೆ ನಿಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
Kshetra Samachara
21/04/2022 02:22 pm