ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಾತಿಭೇದ ಬೇಡ ನಾವೆಲ್ಲರೂ ಒಂದೇ : ನುಗ್ಗಿಕೇರಿ ದೇವಸ್ಥಾನದ ಟ್ರಸ್ಟಿ ನರಸಿಂಹರಾವ್

ಧಾರವಾಡ: ನುಗ್ಗಿಕೇರಿ ಗಲಾಟೆ ವಿಚಾರವಾಗಿ, ನಮ್ಮಗೆ ಎನು ಸಮಸ್ಯೆಯಾಗಿದೆ ಎನ್ನುವುದು ಗೊತ್ತಾಗಿದೆ. ಇದಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಪರ್ಯಾಯ ವ್ಯವಸ್ಥೆ ಕಂಡು ಹಿಡಿಯುದಕ್ಕೆ ಇಂದು ಸಂಜೆ ದೇವಾಲಯದ ಪರ್ಯಾಸ್ಥರ ಮೀಟಿಂಗ್ ಕರೆದಿದ್ದೇವೆ ಎಂದು ದೇವಾಸ್ಥಾನ ಟ್ರಸ್ಟಿ ನರಸಿಂಹರಾವ್ ದೇಸಾಯಿ ಹೇಳಿದ್ದಾರೆ.

ಧಾರವಾಡದ ಹೊರವಲಯದ ನುಗ್ಗಿಕೇರಿ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಎಲ್ಲಾ ಜಾತಿ ವ್ಯಾಪಾರಸ್ಥರು ಇದ್ದಾರೆ, ಹಿಂದೂ, ಮುಸ್ಲಿಂ ತಮಿಳು,ತೆಲುಗು ಸೇರಿದಂತೆ ಎಲ್ಲಾ ಜನಾಂಗದವರು ವ್ಯಾಪಾರ ಮಾಡುತ್ತಿದ್ದಾರೆ.

ಆದ್ರೆ, ಆಂಜನೇಯ ದೇವಸ್ಥಾನದ ಸುತ್ತಲೂ ಇರುವ ವ್ಯಾಪಾರಸ್ಥರು ಜಾತಿಭೇದವಿಲ್ಲದೆ ಒಂದೇ ಕುಟುಂಬದವರಂತೆ ಬಾಳಬೇಕು ಎನ್ನುವುದೇ ನಮ್ಮ ಉದ್ದೇಶ ಎಂದರು.

ಈ ವಿಚಾರವಾಗಿ ನಾನು ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಇಲ್ಲಿ ನಾನೊಬ್ಬನೇ ಎಲ್ಲವನ್ನು ನಿರ್ಧಾರ ಮಾಡಲು ಸಾಧ್ಯವಿಲ್ಲ ಇನ್ನು 12,ಜನ ಪರ್ಯಾಸ್ಥರು ಇದ್ದಾರೆ, ಆದ ಕಾರಣ ಸಂಜೆ ಎಲ್ಲರೂ ಸೇರಿ ಮೀಟಿಂಗ್ ಮಾಡಿ ಒಂದು ವ್ಯವಸ್ಥೆ ಮಾಡುತ್ತವೆ ಎಂದರು.

Edited By : Nagesh Gaonkar
Kshetra Samachara

Kshetra Samachara

11/04/2022 04:07 pm

Cinque Terre

28.57 K

Cinque Terre

12

ಸಂಬಂಧಿತ ಸುದ್ದಿ