ಧಾರವಾಡ: ಒಳ್ಳೆಯ ರೀತಿಯಲ್ಲಿ ಬಂದರೆ ನಮ್ಮಷ್ಟು ಒಳ್ಳೆಯವರೇ ಯಾರೂ ಇಲ್ಲ. ಕೆಟ್ಟ ರೀತಿಯಲ್ಲಿ ಬಂದರೆ ನಮ್ಮಷ್ಟು ಕೆಟ್ಟವರೇ ಯಾರೂ ಇಲ್ಲ ಎಂದು ಶಾಸಕ ಅಮೃತ ದೇಸಾಯಿ ಎಚ್ಚರಿಕೆ ನೀಡಿದರು.
ಶಿವಮೊಗ್ಗದ ಹರ್ಷಾ ಕೊಲೆ ಖಂಡಿಸಿ ಧಾರವಾಡದ ಕಡಪಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ನಾವು ಶಾಂತಿಪ್ರಿಯರು ಎಂದು ನಮ್ಮ ತಂಟೆಗೆ ಬರುತ್ತಿದ್ದಾರೆ. ಶಾಂತಿ ಪ್ರಿಯರು ಎಂದು ನಮ್ಮನ್ನು ಮುಟ್ಟುತ್ತಿದ್ದಾರೆ. ನಮ್ಮನ್ನು ಮುಟ್ಟಬೇಡಿ. ಮುಟ್ಟಿದರೆ ಬೇರೆಯೇ ಆಗುತ್ತದೆ ಎಂಬ ಎಚ್ಚರಿಕೆ ಸಂದೇಶ ನೀಡಿದರು.
ಇದೇ ನಾಡಿನಲ್ಲಿ ಛತ್ರಪತಿ ಶಿವಾಜಿಯೂ ಹುಟ್ಟಿದ್ದಾನೆ. ಸಂಗೊಳ್ಳಿ ರಾಯಣ್ಣನೂ ಹುಟ್ಟಿದ್ದಾನೆ. ನಮಗೆ ಬದುಕುವುದು ಗೊತ್ತು. ಗಟ್ಟಿಯಾಗಿ ಬದುಕುತ್ತೇವೆ. ಮತ್ತೆ ನಾವು ಹಿಂದೂ ರಾಷ್ಟ್ರ ಕಟ್ಟಬೇಕಿದೆ ಎಂದು ಶಾಸಕ ಅಮೃತ ಹೇಳಿದರು.
Kshetra Samachara
27/02/2022 09:30 pm