ಕುಂದಗೋಳ : ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮೀಟಿಯ ಸದಸ್ಯರ ಅಧಿಕಾರ ಅವಧಿ ಮುಗಿದರೂ ಸಹ ಚುನಾವಣೆ ನಡೆದಿಲ್ಲ, ಈ ಬಗ್ಗೆ ಸಂಬಂಧಪಟ್ಟ ವಕ್ಫ್ ಇಲಾಖೆ ಹಾಗೂ ಜಿಲ್ಲಾ ವಕ್ಫ್ ಕಮೀಟಿ ಕಾನೂನು ಪ್ರಕಾರ ಚುನಾವಣೆ ನಡೆಸಿ ನೂತನ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಎಮ್.ಕೆ.ನಾಸವಾಲೇ ಹಾಗೂ ಮುಸ್ಲಿಂ ಬಾಂಧವರು ಮಾಧ್ಯಮದ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ 2006 ರಲ್ಲೇ ಅಂಜುಮನ್ ಎ ಇಸ್ಲಾಂ ಕಮೀಟಿಗೆ ಚುನಾವಣೆ ನಡೆದು ಅಧಿಕಾರ ವಿಸ್ತರಿಸುತ್ತಾ ಅ.10 ಕ್ಕೆ ಅಧಿಕಾರ ಅವಧಿ ಮುಗಿದಿದೆ.
ಮರಳಿ ಚುನಾವಣೆ ನಡೆಸದೇ ಕೆಲ ಅಧಿಕಾರಿಗಳ ಕೈವಾಡ ಹಾಗೂ ಸ್ಥಳೀಯ ಕೆಲ ಜನರ ಸಹಕಾರದಿಂದ ಕಮೀಟಿಗೆ ಒಮ್ಮತದ ಸಮಿತಿ ರಚಿಸಲು ಆಲೋಚನೆ ನಡೆಸಿದ್ದಾರೆ. ಈ ಪ್ರಕ್ರಿಯೆಗೆ ಅವಕಾಶ ನೀಡದೆ ಕಾನೂನು ರೀತಿಯಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿಯ ಚುನಾವಣೆ ನಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ವೇಳೆ ಮುಸ್ಲಿಂ ಸಮಾಜದ ಮುಖಂಡರು ಮಾತನಾಡಿ ಕುಂದಗೋಳದಲ್ಲಿ 8 ಜಮಾತ್ ಇದೆ. ಈ ಹಿಂದಿನ 1060 ಜನ ಅಂಜುಮ್ ಇಸ್ಲಾಂ ಕಮೀಟಿ ಸದಸ್ಯರಿದ್ದಾರೆ ಎಲ್ಲರ ನೀರ್ಣಯ ಇಲ್ಲಿ ಪ್ರಮುಖ ಹೀಗಾಗಿ ಚುನಾವಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Kshetra Samachara
26/10/2021 02:38 pm