ಧಾರವಾಡ: ಜನರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವ ಕೆಲಸ ನಡೆಯುತ್ತಿದೆ. ಹೀಗಾಗಿ ಮತಾಂತರ ಕಾಯ್ದೆ ಬೇಗನೇ ಕಾರ್ಯರೂಪಕ್ಕೆ ಬರಬೇಕಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಯಾರು ಯಾವ ಧರ್ಮವನ್ನಾದರೂ ಫಾಲೋ ಮಾಡಬಹುದು. ಆದರೆ, ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದು ತಪ್ಪು ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಕೂಡ ಆದಷ್ಟು ಬೇಗ ಇಂಪ್ಲಿಮೆಂಟ್ ಆಗುತ್ತದೆ. ಕೋವಿಡ್ ಇದ್ದ ಕಾರಣಕ್ಕೆ ಅದು ಇಂಪ್ಲಿಮೆಂಟ್ ಆಗಿರಲಿಲ್ಲ. ಆದಷ್ಟು ಬೇಗ ಆ ಕಾಯ್ದೆ ಕೂಡ ಇಂಪ್ಲಿಮೆಂಟ್ ಆಗುತ್ತದೆ ಎಂದರು.
Kshetra Samachara
02/10/2021 01:02 pm