ಧಾರವಾಡ: ಲಿಂಗಾಯತ ಪ್ರತ್ಯೇಕ ಧರ್ಮ ಅಲ್ಲ. ಇದು ಅಖಂಡ ಹಿಂದೂ ಯುಕ್ತ ವೀರಶೈವ ಲಿಂಗಾಯತ ಧರ್ಮ ಎಂದು ವಿಶ್ವ ವೀರಶೈವ ಸಂರಕ್ಷಣಾ ಸಮಿತಿ, ನೀಲಕಂಠೇಶ್ವರ ಟ್ರಸ್ಟ್ ರಾಷ್ಟ್ರೀಯ ಸಂಚಾಲಕ ನಾಗನಗೌಡ ನೀರಲಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಯಾರು ಹೋರಾಟ ಮಾಡುತ್ತಿದ್ದಾರೋ ಅವರನ್ನೇ ಕೇಳಬೇಕು. ಯಾಕೆ ಈ ಹೋರಾಟ ಮಾಡುತ್ತಿದ್ದಾರೆಂದು. ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮಲ್ಲಿದೆ. ನವ ಶಿಲಾಯುಗದಿಂದ ಕಲೆ, ಸಂಸ್ಕೃತಿ, ಕ್ರೀಡೆಯನ್ನು ನೋಡಿದಾಗ ವೀರಶೈವ ಲಿಂಗಾಯತ ಒಂದೇ ಎಂಬುದು ಗೊತ್ತಾಗುತ್ತದೆ ಎಂದು ನಾಗನಗೌಡ ಹೇಳಿದರು.
Kshetra Samachara
23/09/2021 04:22 pm