ಕುಂದಗೋಳ : ಈ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಪಡೆದಿದ್ದ ಆರು ತಿಂಗಳ ಅವಧಿ ಮುಕ್ತಾಯವಾದ್ರೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಸಂಬಂಧಪಟ್ಟಂತೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ತಮ್ಮ ನಿಲುವೇನು ? ಎಂಬುದನ್ನು ತಿಳಿಸಬೇಕು ಆದಷ್ಟೂ ಶೀಘ್ರ ಪಂಚಮರಿಗೆ 2ಎ ಮೀಸಲಾತಿ ನೀಡಬೇಕೆಂದು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಅವರು ಕುಂದಗೋಳ ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಪಂಮಸಾಲಿ ಸಮಾಜದ ಸಭೆ ಏರ್ಪಡಿಸಿ ಕಿತ್ತೂರು ರಾಣಿ ಚೆನ್ನಮ್ಮನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತಂತೆ ವಿವಿಧ ರೂಪುರೇಷೆ ಯೋಜನೆ ಹಾಕಿಕೊಳ್ಳಲು ಹುಬ್ಬಳ್ಳಿ ಗೋಕುಲ ಗಾರ್ಡನ್' ನಲ್ಲಿ ಸೆ.25 ರಂದು ಕಾರ್ಯಕ್ರಮ ಏರ್ಪಡಿಸಲಾಗಿದ್ದು ಪಂಚಮಸಾಲಿ ಸಮಾಜದ ಬಾಂಧವರು ಪ್ರತಿಜ್ಞಾ ಪಂಚಾಯಿತಿ ಅಭಿಯಾನವನ್ನು ಯಶಸ್ವಿಗೊಳಿಸವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು, ಪಂಚಮಸಾಲಿ ಸಮಾಜದ ಬಾಂಧವರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.
Kshetra Samachara
23/09/2021 02:17 pm