ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುತಾಲಿಕ ಆಗ್ರಹ

ಧಾರವಾಡ : ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಈ ಬಾರಿ ಗಣೇಶ್ ಚತುರ್ಥಿ ಸರಳವಾಗಿ ಆಚರಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀರಾಮಸೇನೆ,ಕಲಾವಿದ ಮಂಜುನಾಥ ಹಿರೇಮಠ,ಭಜರಂಗದ,ಹೆಬ್ಬಳ್ಳಿ ಅಗಸಿಯ ಗಜಾನನ ಯುವಕ ಮಂಡಳಿಯಿಂದ ಕಚೇರಿ ಎದುರು ಗಣಪತಿ ಮೂರ್ತಿ ಇಟ್ಟು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧ ವಿಧಿಸಿದೆ.ಆದ್ರೆ ಎಲ್ಲ ಜೀವನ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದು ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಹೊಟ್ಟೆ ಮೇಲೆ ಹೊಡೆದ ಹಾಗೆ ಆಗುತ್ತದೆ.ಹೀಗಾಗಿ ಕಲಾವಿದರ ಗಣೇಶ ಮೂರ್ತಿ ತಯಾರಿಸಿದ್ದಾರೆ.ಈಗಾಗಲೇ ಶಾಲಾ ಕಾಲೇಜುಗಳು,ಮಾಲ್,ಚಿತ್ರಮಂದಿರಗಳು,ಚುನಾವಣೆ,ರಾಜಕೀಯ ಸಮಾವೇಶಕ್ಕೆ ಅವಕಾಶ ನೀಡಲಾಗಿದೆ.ಅದೇ ರೀತಿ ಸಾರ್ವಜನಿಕ ಗಣೇಶ ಉತ್ಸವ ಆಚರಿಸಲು ಅವಕಾಶ ನೀಡುವಂತೆ ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

21/08/2021 01:01 pm

Cinque Terre

51.46 K

Cinque Terre

6

ಸಂಬಂಧಿತ ಸುದ್ದಿ