ಕಲಘಟಗಿ: ಪುರೋಹಿತರಿಗೆ ಮುಖ್ಯವಾಗಿ ಆಸೆ ಇರಬಾರದು,ಜಾತಿ ನೋಡದೇ,ನೊಂದ ಜನರ ಕಣ್ಣೀರು ಒರಿಸುವ ಕೆಲಸ ಜಂಗಮರಿಂದಾಗಲಿ ಎಂದು ಬಾಲೆಹೊಸುರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಅವರು ದಾಸ್ತಿಕೊಪ್ಪ ಹನ್ನೆರಡು ಮಠದಲ್ಲಿ ಕಲಘಟಗಿ ತಾಲೂಕು ಅರ್ಚಕ ಹಾಗೂ ಪರೋಹಿತರ ಸಂಘದ ಉದ್ಘಾಟನಾ ಸಮಾರಂಭದ ನೇತ್ರತ್ವ ವಹಿಸಿ ಮಾತನಾಡಿ,ಕಾಯಕ ಬೇರೆ,ಪರಂಪರೆ ಬೇರೆ,ಜಂಗಮ ಕಾಯಕವಾಗಲಿ ಎಂದರು.ಜಂಗಮ ಸಮಾಜ ಎತ್ತರವಾಗಿ ಬೆಳೆಯ ಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಹನ್ನೆರಡು ಮಠದ ಶ್ರೀ ರೇವಣಶಿದ್ಧ ಶಿವಾಚಾರ್ಯರು,ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ, ಶ್ರೀ ಮರಳು ಸಿದ್ಧ ಸ್ವಾಮೀಜಿ,ನಾಗರಾಜ ಛಬ್ಬಿ,ಬಂಗಾರೇಶ ಹಿರೇಮಠ,ಪ್ರಕಾಶ ಬೆಂಡಿಗೇರಿ,ಭಾರತಿ ಕುಡಚಿಮಠ,ಚನ್ನಯ್ಯ ಹಿರೇಮಠ,ಎಸ್ ವ್ಹಿ ತಡಸಮಠ,ಮಹೇಶ್ವರಯ್ಯ ಹಿರೇಮಠ,ಸೇರಿದಂತೆ ಪರೋಹಿತರು,ಅರ್ಚಕರು,ಜಂಗಮ ಸಮಾಜದವರು ಉಪಸ್ಥರಿದ್ದರು.
Kshetra Samachara
26/02/2021 03:24 pm