ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿ ಹಬ್ಬಕ್ಕೆ ನಾವು ಡಿಜೆ ಹಚ್ಚೇ ಹಚ್ಚುತ್ತೇವೆ ತಾಕತ್ತಿದ್ದರೆ ಸೀಜ್ ಮಾಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲ್ ಹಾಕಿದ್ದಾರೆ.
ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿಗೆ ಸರ್ಕಾರ ಡಿಜೆ ಹಚ್ಚಬಾರದು, ಸೌಂಡ್ ಸಿಸ್ಟಮ್ ಹಚ್ಚಬಾರದು ಎಂದು ನಿರ್ಬಂಧ ಹೇರುತ್ತಿದೆ. ಆದರೆ, ಪ್ರತಿ ದಿನ ಐದು ಬಾರಿ ಮಸೀದಿಗಳಲ್ಲಿ ನಮಾಜ್ ಮಾಡುವ ಶಬ್ದ ಹೊರ ಬೀಳುತ್ತಿದೆ. ಇದು ಮಸೀದಿ ಇರಬಹುದು ಮತ್ತ್ಯಾವುದೇ ಧರ್ಮದ ಮಂದಿರಗಳಿರಬಹುದು ಎಲ್ಲದಕ್ಕೂ ಅನ್ವಯಿಸುತ್ತದೆ. ಸ್ವತಃ ನ್ಯಾಯಾಲಯವೇ ಸರ್ಕಾರಕ್ಕೆ ಸ್ಪೀಕರ್ ಬಗ್ಗೆ ತಾಕೀತು ಮಾಡಿದೆ.
ಹೀಗಾಗಿ ಮಸೀದಿ, ಮಂದಿರಗಳ ಮೇಲಿರುವ ಅನಧಿಕೃತ ಸ್ಪೀಕರ್‌ಗಳನ್ನು ತೆಗೆಯಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.
ಮೊದಲು ಮಸೀದಿಗಳ ಮೇಲಿರುವ ಅನಧಿಕೃತ ಸ್ಪೀಕರ್‌ಗಳನ್ನು ತೆಗೆಸಬೇಕು. ಆನಂತರ ನಾವು ರಾಜ್ಯಾದ್ಯಂತ ಡಿಜೆಯನ್ನು ಬ್ಯಾನ್ ಮಾಡುತ್ತೇವೆ. ಇಲ್ಲದೇ ಹೋದರೆ ನಾವು ಗಣೇಶ ಚತುರ್ಥಿಯಂದು ಡಿಜೆ ಹಚ್ಚೇ ಹಚ್ಚುತ್ತೇವೆ ತಾಕತ್ತಿದ್ದರೆ ಪೊಲೀಸ್ ಇಲಾಖೆಯವರು ತಡೆಯಬೇಕು ಎಂದು ಮುತಾಲಿಕ್ ಸವಾಲ್ ಹಾಕಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/08/2022 03:11 pm