ಹುಬ್ಬಳ್ಳಿ: ವಾಣಿಜ್ಯನಗರಿಯ ಜನತೆಗೆ ಮನೆ ಹೋಳಿಗೆ ರುಚಿಯನ್ನು ಹಂಚಲು ಹುಬ್ಬಳ್ಳಿ ಶಿರೂರ ಪಾರ್ಕ್ ನಲ್ಲಿ ಸಿದ್ಧಗೊಂಡಿರುವ ಮನೆ ಹೋಳಿಗೆ, ಕುರುಕಲು ತಿಂಡಿ ಮಳಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ರುಚಿಕರವಾದ 21 ವಿವಿಧ ತರಹದ ಹೋಳಿಗೆಗಳು ಮತ್ತು 200ಕ್ಕೂ ಹೆಚ್ಚು ತಿಂಡಿ ತಿನಿಸುಗಳು, ಚಕ್ಕುಲಿ, ಉಂಡಿ, ನಿಪ್ಪಟ್ಟು, ಕೋಡುಬಳೆ ಸೇರಿದಂತೆ ಇನ್ನಿತರ ಖಾದ್ಯಗಳು ಒಂದೇ ಸೂರಿನಡಿಯಲ್ಲಿ ಸಿಗಲು ಸ್ಥಾಪನೆಗೊಂಡಿರುವ ಮಳಿಗೆಯನ್ನು ವೀಕ್ಷಿಸಿದ ಸಚಿವ ಜಗದೀಶ ಶೆಟ್ಟರ್ ರುಚಿಯ ಕುರಿತು ಮನಸಾರೆ ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸತೀಶ ಪಲಟನಕರ, ಅನಿಲ್ ಪಲಟನಕರ,ದಿನೇಶ ಪಲಟನಕರ,ಜೈ ಆನಂದ, ಭಾಸ್ಕರ್ ಸೇರಿದಂತೆ ಇತರರು ಇದ್ದರು.
Kshetra Samachara
23/10/2020 02:13 pm