ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾಮಪತ್ರ ಸಲ್ಲಿಸಿದ ಎಐಎಂಐಎಂ, ಜೆಡಿಎಸ್

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಫಲಿತಾಂಶ ಬಂದು ಒಂಬತ್ತು ತಿಂಗಳ ಬಳಿಕ 21ನೇ ಅವಧಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ವಿರೇಶ ಅಂಚಟಗೇರಿ ಹಾಗೂ ಉಪಮೇಯರ್ ಅಭ್ಯರ್ಥಿಯಾಗಿ ಉಮಾ ಮುಕ್ಕುಂದ ನಾಮಪತ್ತ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತಿದ್ದಂತೆಯೇ ಕಾಂಗ್ರೆಸ್‌ನಿಂದ ಪಾಲಿಕೆಯ ವಾರ್ಡ್ ನಂಬರ್ 24ರ ಸದಸ್ಯ ಮೇಯರ್ ಸ್ಥಾನಕ್ಕೆ ಡಾ. ಮಯೂರ ಮೊರೆ, ವಾರ್ಡ್ ನಂಬರ್ 7ರ ಸದಸ್ಯೆ ದೀಪಾ ನೀರಲಕಟ್ಟಿ ಉಪಮೇಯರ್ ಸ್ಥಾನಕ್ಕೆ, ಎಐಎಂಐಎಂದಿಂದ ಮೇಯರ್ ಸ್ಥಾನಕ್ಕೆ ವಾರ್ಡ್ ನಂಬರ್ 71 ನಜೀರ್ ಹೊನ್ನಾಳ, ಉಪಮೇಯರ್ ಸ್ಥಾನಕ್ಕೆ ವಾರ್ಡ್ ನಂಬರ್ 76 ರ ಸದಸ್ಯೆ ವಹಿದಾಖಾನಂ ಕಿತ್ತೂರು ನಾಮಪತ್ರ ಸಲ್ಲಿಕೆ ಮಾಡಿದರು.

ಇನ್ನೂ ಜೆಡಿಎಸ್ ಅಭ್ಯರ್ಥಿಗಳು ‌ಕೂಡ ನಾಮಪತ್ರ ಸಲ್ಲಿಕೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆಯ ಅವಧಿ ಪೂರ್ಣಗೊಂಡಿದ್ದು, ಇನ್ನೆನೂ ಕೆಲವು ಕ್ಷಣಗಳಲ್ಲಿ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

Edited By :
Kshetra Samachara

Kshetra Samachara

28/05/2022 02:59 pm

Cinque Terre

38.29 K

Cinque Terre

4

ಸಂಬಂಧಿತ ಸುದ್ದಿ