ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನಾಗರಾಜ್ ಛಬ್ಬಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಮನವಿ

ಪಟ್ಟಣದ ಹನ್ನೆರಡು ಮಠದಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನೆ ಸಭೆ ನಡೆಸಲಾಯಿತು. ಸಭೆಗೆ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ ಹಾಗೂ ಧಾರವಾಡ ಜಿಲ್ಲೆಯ ಕೆಪಿಸಿಸಿ ಅಧ್ಯಕ್ಷರಾದ ವಿಜಯಕುಮಾರ್ ಎಂ ಆರ್ ಆಗಮಿಸಿದ್ದರು.

ಕಲಘಟಗಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಎರಡು ಭಾಗಗಳಾಗಿ ವಿಂಗಡನೆಯಾಗಿರುವ ಹಿನ್ನೆಲೆಯಲ್ಲಿ ನಾಗರಾಜ ಛಬ್ಬಿ ಹಾಗೂ ಸಂತೋಷ ಲಾಡ್ ಇಬ್ಬರ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದ್ದು ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ನಿಡಬೇಕು ಎಂಬ ಸಮೀಕ್ಷೆಯ ವರದಿಗಾಗಿ ಇಂದು ಕಾರ್ಯಕರ್ತರ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ನಾಗರಾಜ್ ಛಬ್ಬಿ ಕಾರ್ಯಕರ್ತರು ಮಾತ್ರ ಹಾಜರಾಗಿದ್ದು ಸಂತೋಷ ಲಾಡ್ ಕಾರ್ಯಕರ್ತರು ಇರದೆ ಇರುವದು ಕಾಂಗ್ರೆಸ್ ಎರಡು ಬಣವಾಗಿರುವುದು ಎದ್ದು ಕಾಣುವಂತಿತ್ತು. ಸಭೆಗೆ ಆಗಮಿಸಿದ ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದು ನಾಗರಾಜ ಛಬ್ಬಿ ಯವರಿಗೆ ಟಿಕೆಟ್ ನಿಡಬೇಕೆಂದು ಒತ್ತಾಯುಸಿದರು.

ವರದಿ: ಉದಯ ಗೌಡರ

Edited By :
Kshetra Samachara

Kshetra Samachara

15/07/2022 05:22 pm

Cinque Terre

53.04 K

Cinque Terre

17

ಸಂಬಂಧಿತ ಸುದ್ದಿ