ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಿಎಸ್‌ಐ ಅಭ್ಯರ್ಥಿಗಳ ಮುತ್ತಿಗೆ: ಎಚ್‌ಡಿಕೆ ಕೆಂಡಾಮಂಡಲ!

ಪಿಎಸ್‌ಐ ಅಭ್ಯರ್ಥಿಗಳು ತಮಗೆ ಘೇರಾವ್ ಹಾಕಿದ್ದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಅವರೇನು ಮನವಿ ಕೊಡಲಿಕ್ಕೆ ಬಂದ ಅಭ್ಯರ್ಥಿಗಳಾ ಅಥವಾ ರೌಡಿಸಂ ಮಾಡೋಕೆ ಬಂದವರಾ? ಮನವಿ ಕೊಡೋಕೆ ಬಂದವರು ಆ ರೀತಿ ವರ್ತನೆ ಮಾಡುತ್ತಾರಾ? ಅಲ್ಲಿ ಬೇಕಂತಲೇ ದೊಂಬಿ ಎಬ್ಬಿಸೋದಕ್ಕೆ ಕ್ರೌಡ್ ಕಳುಹಿಸಲಾಗಿತ್ತು. ಅದಕ್ಕೆ ನಾನು ಪಾಲುದಾರನಾಗಬೇಕಾ? ಎಂದು ಪ್ರಶ್ನಿಸಿದರು.

ಇಂತವುಗಳನ್ನು ನಾನು ಬಹಳ ನೋಡಿದ್ದೇನೆ. ಬಿಜೆಪಿ ನಾಯಕರಿಗೆ ನಾನು ಹೇಳಬಯಸುತ್ತೇನೆ ಈ ಆಟ ನನ್ನ ಹತ್ತಿರ ನಡೆಯೋದಿಲ್ಲ. ಅಲ್ಲಿಗೆ ಬಂದವರು ಯಾರು? ನಾನು ಬರುವ ವಿಷಯ ಅವರಿಗೆ ಹೇಗೆ ಗೊತ್ತಾಯ್ತು? ಅವರನ್ನು ಕಳಿಸಿದವರಾದರೂ ಯಾರು? ಯಾರೋ ಒಬ್ಬ ಬಂದು 56 ಸಾವಿರ ಜನ ನಾವು ಮೆಂಟಲಿ ತೊಂದರೆಗೆ ಒಳಗಾಗಿದ್ದೇವೆ ಎನ್ನುತ್ತಾನೆ. ಆತ ಹೇಳುವ ವಿಧಾನವೇ ಬೇರೆ ಇತ್ತು.

ನಾನು ಬಂದ ಕೂಡಲೇ ಅವರ ಮನವಿ ಆಲಿಸಿದ್ದೇನೆ. ಆದರೂ ನನ್ನ ಕಾರಿನ ಹಿಂದೆ ದೊಂಬಿಕೋರರಂತೆ ಓಡಿ ಬಂದರು. ಸರ್ಕಾರ ನನ್ನ ಕೈಯಲ್ಲಿ ಇದೆಯಾ? ಮೋದಿ ಮೋದಿ ಎಂದು ಕೂಗುವವರು ನನ್ನ ಹತ್ರ ಯಾಕೆ ಬಂದ್ರು? ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಒಬ್ಬ ಮಾಜಿ ಸಿಎಂಗೆ ಕೊಡುವ ಭದ್ರತೆ ಇದೇನಾ? ಎಂದು ಪ್ರಶ್ನಿಸಿದ ಅವರು, ನನ್ನ ಗನ್ ಮ್ಯಾನ್ ಹಲ್ಲೆ ಮಾಡಿರುವ ವಿಷಯ ನನಗೆ ಗೊತ್ತಿಲ್ಲ ಎಂದರು.

Edited By :
Kshetra Samachara

Kshetra Samachara

04/06/2022 06:35 pm

Cinque Terre

25.43 K

Cinque Terre

2

ಸಂಬಂಧಿತ ಸುದ್ದಿ