ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಲೇ ಇರಲಿ; ಪಹ್ಲಾದ ಜೋಶಿ

ಸಿದ್ಧರಾಮಯ್ಯ ಕರ್ನಾಟಕದಲ್ಲಿ ಭ್ರಮೆಯಲ್ಲಿ ಓಡಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಛತ್ತೀಸ್ಗಡ ಹಾಗೂ ರಾಜಸ್ಥಾನದಲ್ಲೂ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಪಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗೋಡ್ಸೆ ಪೂಜೆ ಮಾಡುತ್ತಾರೆ ಎಂಬ ಹೇಳಿಕೆ ವಿಚಾರಕ್ಕೆ, ನಾವು ಯಾವತ್ತೂ ಗೋಡ್ಸೆಯನ್ನ ಪೂಜೆ ಮಾಡಿಲ್ಲ. ಸಿದ್ಧರಾಮಯ್ಯ ಯಾರದೋ ತುಷ್ಠೀಕರಣಕ್ಕಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಂಸೆಯ ರಾಜಕಾರಣ ಒಪ್ಪಲ್ಲ.

ಸಿದ್ಧರಾಮಯ್ಯ ಎಸ್ ಡಿಪಿಐ ಅವರ ಮೇಲಿದ್ದ ಕೇಸ್ಗಳನ್ನ ವಾಪಸ್ ಪಡೆದಿದ್ದರು. ತುಷ್ಠೀಕರಣದ ಪರಾಕಾಷ್ಟೆ ಸಿದ್ಧರಾಮಯ್ಯ ಕಾಲದಲ್ಲಾಗಿತ್ತು ಇದು ಓಟ್ ಬ್ಯಾಂಕ್ ರಾಜಕೀಯ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರ ನಿಶ್ಚಿತ ಎಂಬ ಹೇಳಿಕೆ ವಿಚಾರಕ್ಕೆ, ಸಿದ್ಧರಾಮಯ್ಯ ಹಗಲು ಕನಸು ಕಾಣಲು ಅಧಿಕಾರ ಇದೆ ಹೀಗಾಗಿ ಕನಸು ಕಾಣುತ್ತಲೇ ಇರಲಿ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/08/2022 07:37 pm

Cinque Terre

122.46 K

Cinque Terre

10

ಸಂಬಂಧಿತ ಸುದ್ದಿ