ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾಜಿಸಚಿವ ಈಶ್ವರಪ್ಪ ನಾಲಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ಇವರ
ವಿರುದ್ಧ ಕಾರ್ಯಕರ್ತರು ಭುಗಿಲೆದಿದ್ದು, ರಾಜೀನಾಮೆ ನೀಡಿರೋ ಬಿಜೆಪಿ ಕಾರ್ಯಕರ್ತೆ ರೇಖಾ ಹೊಸೂರು ಪಬ್ಲಿಕ್ ನೆಕ್ಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ಜಿಲ್ಲಾ ಬಿಜೆಪಿಕಾರ್ಯಕಾರಣಿಗೆ ರಾಜೀನಾಮೆ ನೀಡಿರುವ ರೇಖಾ ಹೊಸೂರು, ಈಶ್ವರಪ್ಪ ಕಾರ್ಯಕರ್ತರ ಬಗ್ಗೆ ಕೀಳಾಗಿ ಮಾತನಾಡಿರುವುದು ನಾಚಿಕೆ ವಿಚಾರ, ರಾಜಕೀಯಕ್ಕೆ ಬರೋಕೆ ಕಾರ್ಯಕರ್ತರು ಬೇಕು. ಆದರೆ ಅಧಿಕಾರ ಅನುಭವಿಸಲು ನಿಮ್ಮ ಮಕ್ಕಳು ಬೇಕಾ.? ಈ ಹಿಂದೆ ನಿಮ್ಮ ಬಳಿ ಏನಿತ್ತು ? ಈಗ ಎಷ್ಟು ಕಾರ್ ಗಳಿವೆ ? ಇನ್ನೆಷ್ಟು ಆಸ್ತಿ ಮಾಡಿದ್ದಿರಿ ? ಇದು ಬಡ ಕಾರ್ಯಕರ್ತರ ಶ್ರಮ. ಇದನ್ನ ಮರೆಯಬೇಡಿ ಎಂದು ಸಿಟ್ಟು ಹೊರಹಾಕಿದರು.
ಕಾರ್ಯಕರ್ತರ ಶ್ರಮದಿಂದ ಶೋಕಿ ಮಾಡಿ ಮಾತಾಡೋದಲ್ಲಾ.ನಿಮಗೆ ತಾಕ್ತಿದ್ದ್ರೆ ಪ್ರವೀಣ್ ಅವರ ಹೆಂಡತಿ ಟಿಕೆಟ್ ಘೋಷಣೆ ಮಾಡಿ. ಆಗ ಗೊತ್ತಾಗುತ್ತೆ ನಿಮ್ಮ ನಿಯತ್ತು. ಸಾಮಾನ್ಯ ಕಾರ್ಯಕರ್ತರನ್ನು ಬೆಳೆಯಲು ಬಿಜೆಪಿಯಲ್ಲಿ ಕೆಲವರು ಬಿಡುತ್ತಿಲ್ಲ.ಏನಾದರೂ ವಿಭಿನ್ನ ಕಾರ್ಯಕ್ರಮ ಮಾಡಲು ಹೋದ್ರೆ, ಯಡಿಯೂರಪ್ಪನವರ ಮಗ ವಿಜಯೇಂದ್ರ ಕಾರ್ಯಕರ್ತರಿಗೆ ಧಮ್ಕಿ ಹಾಕ್ತಾರೆ. ಬಿಜೆಪಿಯಲ್ಲಿ ಯುವ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ರೇಖಾ ಹೊಸುರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/07/2022 01:40 pm