", "articleSection": "Politics,News", "image": { "@type": "ImageObject", "url": "https://prod.cdn.publicnext.com/s3fs-public/421698-1736595489-A10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಸಿಎಂ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ನಗರದ...Read more" } ", "keywords": ",Hubballi-Dharwad,Politics,News", "url": "https://publicnext.com/article/nid/Hubballi-Dharwad/Politics/News" } ಹುಬ್ಬಳ್ಳಿ: ಸಿಎಂ ಕಿತ್ತಾಟದಿಂದ ಸರ್ಕಾರ ಪತನ - ರಾಜ್ಯ ಸರ್ಕಾರದ ಭವಿಷ್ಯ ನುಡಿದ ಶೆಟ್ಟರ್..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಎಂ ಕಿತ್ತಾಟದಿಂದ ಸರ್ಕಾರ ಪತನ - ರಾಜ್ಯ ಸರ್ಕಾರದ ಭವಿಷ್ಯ ನುಡಿದ ಶೆಟ್ಟರ್..!

ಹುಬ್ಬಳ್ಳಿ: ಸಿಎಂ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಕಾಂಗ್ರೆಸ್ ನ ಕುರ್ಚಿ ಗುದ್ದಾಟ ಜೋರಾಗಿದೆ. ಸಿಎಂ ಕುರ್ಚಿಗಾಗಿ ಅವರಲ್ಲೇ ಗುದ್ದಾಟ ನಡೆದಿವೆ. ಒಂದಲ್ಲ ಒಂದು ದಿನ ಹೊರ ಬರುತ್ತೆ ಅಂತ ಹೇಳಿದ್ದೆ.‌ ಈಗಾಗಲೇ ಔತಣಕೂಟ ಆರಂಭವಾಗಿದೆ.‌ಕೆಲ ಸಚಿವರು ಸೇರಿ ಔತಣಕೂಟ ಮಾಡಿದರು. ಎಸ್ ಸಿ, ಎಸ್ಟಿ ಶಾಸಕರು, ಮಂತ್ರಿಗಳ ಔತಣ ಕೂಟಕ್ಕೆ ಅಡ್ಡಗಾಲು ಹಾಕಿದರು.‌ ಅಡ್ಡಗಾಲು ಹಾಕೋ ಕೆಲಸ ಡಿ.ಕೆ.ಶಿವಕುಮಾರ್ ಮಾಡಿದ್ದರು ಎಂದರು.

ರಾಜಣ್ಣ, ಎಂ.ಬಿ. ಪಾಟೀಲ್ ಹೇಳಿಕೆ ನೋಡಿದ್ರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಎರಡು ಗುಂಪು ಎದ್ದು ಕಾಣುತ್ತಿದೆ.‌ ಮೊದಲು ಒಳಗೊಳಗೇ ಇತ್ತು. ಈಗ ಹೊರ ಬರುತ್ತಿದೆ.‌ ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಔತಣಕೂಟದ ಬಗ್ಗೆ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಊಟಕ್ಕೆ ಹೋದವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಮ್ಮಲ್ಲಿ ಸಮಸ್ಯೆ ಇದೆ, ಸರಿ ಮಾಡುವ ಕೆಲಸ ಹೈಕಮಾಂಡ್ ಮಾಡ್ತಾರೆ. ಎಸ್ ಸಿ, ಎಸ್ ಟಿ ಸಮಸ್ಯೆಗಳ ಕುರಿತು ಚರ್ಚಿಸಲು ಔತಣಕೂಟ ಸೇರಿದ್ದೇವೆ ಅಂತ ರಾಜಣ್ಣ ಹೇಳುತ್ತಾರೆ. ಈ ರೀತಿಯ ಸಮಸ್ಯೆಗಳನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕು. ಇದನ್ನ ಚರ್ಚೆ ಮಾಡೋಕೆ ಮಂತ್ರಿಗಳು ಸೇರಿದ್ರೆ ನಂಬುತ್ತಾರಾ..? ಎಸ್ ಸಿ, ಎಸ್ಟಿ ಜನರ ಮೇಲೆ ಅವರಿಗೆ ಕಾಳಜಿಯೇ ಇಲ್ಲ. ರಾಜಣ್ಣ ಹೇಳಿಕೆ ನೋಡಿದ್ರೆ ರಾಜಕೀಯ ಸಲುವಾಗಿ ಮಾಡ್ತಿದ್ದಾರೆ. ಎಸ್ ಸಿ ಎಸ್ಟಿ ಕಲ್ಯಾಣಕ್ಕಾಗಿ ಅಲ್ಲ, ಇದನ್ನ ನೀವು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕಿತ್ತು.‌ ಡಿನ್ನರ್ ಮೀಟಿಂಗ್ ಮಾಡುವ ಅವಶ್ಯಕತೆನೇ ಇರಲಿಲ್ಲ ಎಂದು ಪ್ರಶ್ನಿಸಿದರು.

ಪರಮೇಶ್ವರ್ ಡಿನ್ನರ್ ಮೀಟಿಂಗ್ ಬ್ರೇಕ್ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದರ ಹಿಂದೆ ರಾಜಕೀಯ ಇದೆ. ಡಿ.ಕೆ. ಶಿವಕುಮಾರ್ ಗೆ ನನ್ನ ವಿರುದ್ಧ ಷಡ್ಯಂತ್ರ ನಡೀತಾ ಇದೆ ಅಂತ ಅನ್ಸಿದೆ.‌ ಹೀಗಾಗಿ ಶತ್ರು ಸಂಹಾರದ ಪೂಜೆ ಪುನಸ್ಕಾರ ಆರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಬಯಲಲ್ಲೇ ಗುದ್ದಾಟ ನಡೆಯುತ್ತದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/01/2025 05:08 pm

Cinque Terre

44.84 K

Cinque Terre

5

ಸಂಬಂಧಿತ ಸುದ್ದಿ