ಅಳ್ನಾವರ: ಹೊಸ ತಾಲೂಕ ಪಂಚಾಯತ್ ಕಚೇರಿ ಉದ್ಘಾಟನೆ...

ಅಳ್ನಾವರ: ನೂತನ ತಾಲೂಕಿನ ಹೊಸ ತಾಲೂಕ ಪಂಚಾಯತ್ ಕಚೇರಿಯನ್ನು ಶಾಸಕ ಸಿ.ಎಮ್ .ನಿಂಬಣ್ಣವರ ಉದ್ಘಾಟಿಸಿದರು.

ನಂತರ ಶಾಸಕರು ಮಾತನಾಡಿ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ದುಡಿಯಬೇಕು. ಹೊಸ ತಾಲೂಕ ಪಂಚಾಯತ್ ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಮಾದರಿ ಗ್ರಾಮ ಪಂಚಾಯತ್ ಎನ್ನಿಸಿಕೊಳ್ಳಬೇಕು ಎಂದರು.

ಈ ಭಾಗದಲ್ಲಿ ಕಳೆದ ಎರಡು ವರ್ಷದಲ್ಲಿ ಅತೀವೃಷ್ಟಿ, ಕೊರೊನಾ ಹಾವಳಿ ಜನರ ನೆಮ್ಮದಿ ಕೆಡಿಸಿದೆ. ಇಂತಹ ವಿಷಯ ಸ್ಥಿತಿಯನ್ನು ಜನ ಪ್ರತಿನಿಧಿಗಳು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿ ಮಾಡಲು ಸನ್ನದ್ದರಾಗಿ, ನಿಮಗೆ ಶುಭ ಆಗಲಿ ಎಂದು ಹಾರೈಸಿದರು.

ಇಲ್ಲಿನ ಎಪಿಎಂಸಿ ಜಾಗೆಯಲ್ಲಿ ಹೊಸ ತಹಶೀಲ್ದಾರ್ ಕಚಢರಿ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶಾಸಕರು ತಿಳಿಸಿದರು.

ತಾಲೂಕ ಪಂಚಾಯತ್ ಅಧ್ಯಕ್ಷೆ ಸ್ವೀತಾ ಜವಳಿ, ಉಪಾಧ್ಯಕ್ಷೆ ಅಕ್ಕವ್ವ ಬಾಂಗಡಿ, ಧಾರವಾಡ ತಾಲೂಕ ಪಂಚಾಯತ್ ಅಧ್ಯಕ್ಷ ರವಿವರ್ಮ ಪಾಟೀಲ, ಎಪಿಎಂಸಿ ಅಧ್ಯಕ್ಷ ಬಸವರಾಜ ಹೂಸುರ, ರಾಯಪ್ಪ ಹುಡೇದ ಮುಂತಾದವರು ಉಪಸ್ಥಿತರಿದ್ದರು.

Kshetra Samachara

Kshetra Samachara

11 days ago

Cinque Terre

10.22 K

Cinque Terre

0