ನವಲಗುಂದ : ಅತಿವೃಷ್ಟಿ, ಮನೆ ಹಾನಿ, ಬೆಳೆ ಹಾನಿ, ಮಳೆಯಿಂದ ಹದಗೆಟ್ಟ ರಸ್ತೆಗಳು, ಖರೀದಿ ಕೇಂದ್ರ ಇಷ್ಟೆಲ್ಲಾ ಸಮಸ್ಯೆಗಳು ಜನರನ್ನು ಸಂಕಷ್ಟಕ್ಕೆ ದೂಡಿ ಜನರನ್ನು ಬಿಟ್ಟು ಬಿಡದೆ ಕಾಡುತ್ತಿವೆ. ಇದುವರೆಗೆ ಒಂದೆರಡು ಬಾರಿ ಬಿಟ್ಟರೆ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ತಲೆ ಹಾಕಿಲ್ಲ ಅನ್ನೋ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ.
ಎಸ್... ನವಲಗುಂದ ಭಾಗದಲ್ಲಿ ಈ ಬಾರಿಯ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ, ಸಮೀಕ್ಷೆ ನಡೆಸಿದ್ದಾರೆ. ಈ ಭಾಗದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸಹ ಆಗಾಗ ಭೇಟಿ ನೀಡಿದ್ದಾರೆ. ಆದರೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರ ಸುಳಿವೇ ಇಲ್ಲದಂತಾಗಿದೆ. ಬಹು ಮುಖ್ಯವಾಗಿ ರೈತರಿಗೆ ಉಸ್ತುವಾರಿ ಸಚಿವರು ಯಾರು ಆನ್ನೋದೇ ಗೊತ್ತಾಗದೆ ಗೊಂದಲಕ್ಕೆ ಸಿಲುಕಿದ್ದಾರೆ.
ಇನ್ನು ಸಾವಿರಾರು ಹೆಕ್ಟರ್ ಜಮೀನು ನೀರು ಪಾಲಾಗಿದೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಪರಿಶೀಲನಾ ಸಭೆಯನ್ನು ಸಹ ನಡೆಸಿದ್ದಾರೆ. ಪರಿಶೀಲನಾ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳು ಎಷ್ಟರ ಮಟ್ಟಿಗೆ ಪರಿಹಾರಕ್ಕೆ ದಾರಿ ತೋರುತ್ತವೆ. ಅಥವಾ ಪ್ರತಿ ಬಾರಿಯಂತೆ ಕೇವಲ ಆಶ್ವಾಸನೆಗಷ್ಟೇ ಈ ಎಲ್ಲಾ ಚಟುವಟಿಕೆಗಳು ಸೀಮಿತವಾಗುತ್ತವಾ ಅನ್ನೋದು ಸಾರ್ವಜನಿಕರಲ್ಲಿ ಸೃಷ್ಟಿಯಾದ ಯಕ್ಷ ಪ್ರಶ್ನೆಗಳಾಗಿವೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
12/09/2022 02:10 pm