ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಿರತೆ ಸೆರೆಗೆ ಜಿಲ್ಲಾಡಳಿತ ಕ್ರಮ: ರಾಜನಗರದಲ್ಲಿ ಸಭೆ ನಡೆಸಿ ಸಮಾಲೋಚನೆ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳೆದ 4-5 ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ

ಜಿಲ್ಲಾಧಿಕಾರಿ ನಿತೇಶ ಪಾಟೀಲ್ ನೇತೃತ್ವದಲ್ಲಿ ಹುಬ್ಬಳ್ಳಿಯ ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಸಭೆ ನಡೆಸಲಾಯಿತು.

ಚಿರತೆ ಸೆರೆಗೆ ಮುಂದುವರೆದ ಕಾರ್ಯಾಚರಣೆ ಹಿನ್ನೆಲೆ ಸಭೆ ನಡೆಸಿದ್ದು, ಸಭೆಯಲ್ಲಿ DFO ಯಶಪಾಲ ಕ್ಷೀರಸಾಗರ, ಡಿಸಿಪಿ ರಾಮರಾಜನ್, ಹುಬ್ಬಳ್ಳಿ ತಹಶೀಲ್ದಾರ್ ಭಾಗಿಯಾಗಿದ್ದರು. ಇನ್ನೂ ಸಭೆಯಲ್ಲಿ ರಾಜನಗರದ ನಿವಾಸಿಗಳಿಂದ ಹಾಗೂ ಅರಣ್ಯ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಲಹೆ ಸೂಚನೆ ಪಡೆದರು.

ಹಲವು ದಿನಗಳಿಂದ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸುತ್ತಮುತ್ತಲೂ 8 ಬೋನ್ ಗಳನ್ನು ಅಳವಡಿಸಿದರೂ ಕೂಡ ಚಿರತೆ ಮಾತ್ರ ಬೋನ್ ಗೆ ಬಿದ್ದಿಲ್ಲ. ಈ ಹಿನ್ನಲೆಯಲ್ಲಿ ಚಿರತೆ ಸೆರೆಗೆ ಹೆಚ್ಚಿನ ಕಾರ್ಯಾಚರಣೆ ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

Edited By : Nagesh Gaonkar
Kshetra Samachara

Kshetra Samachara

21/09/2021 03:03 pm

Cinque Terre

44 K

Cinque Terre

2

ಸಂಬಂಧಿತ ಸುದ್ದಿ