ಅಳ್ನಾವರ: ರೂ.1.80 ಕೋಟಿ ವೆಚ್ಚದ ಸುಸಜ್ಜಿತ್ ಸರ್ಕಾರಿ ಆಸ್ಪತ್ರೆ ಕಾಮಗಾರಿಗೆ ಶಾಸಕ ಸಿ.ಎಮ್, ನಿಂಬಣ್ಣವರ ಭೂಮಿಪೂಜೆ

ಅಳ್ನಾವರ: ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡವನ್ನು ರೂ.1.80 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕಾರ್ಯಕ್ಕೆ ಶಾಸಕ ಸಿ.ಎಂ. ನಿಂಬಣ್ಣವರ ಭೂಮಿಪೂಜೆ ನೇರವೇರಿಸದರು.

ಆಸ್ಪತ್ರೆಯ ನೀಲ ನಕ್ಷೆ ನೋಡಿ ,ಗುಣ ಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಿದರು. ಜನರಿಗೆ ಉತ್ತಮ ಆರೋಗ್ಯ ಹಾಗೂ ಶಿಕ್ಷಣ ದೊರೆಯಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮಾತನಾಡಿ, ಅಳ್ನಾವರ ಆಸ್ಪತ್ರೆಯನ್ನು ತಾಲೂಕ ಆಸ್ಪತ್ರೆ ಮಾಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.

100 ಹಾಸಿಗೆಯ ಹಾಗೂ ಸರ್ವ ಸಿಬ್ಬಂದಿಯುಳ್ಳ ಆಸ್ಪತ್ರೆ ಇದಾಗಲಿದೆ ಎಂದರು. ತಹಶೀಲ್ದಾರ್ ಅಮರೇಶ ಪಮ್ಮಾರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಾಯ್. ಜಿ.ಗದ್ದಿಗೌಡರ, ಡಾ. ಪಾಟೀಲ, ಡಾ. ವಿಜಯಕುಮಾರ, ನದೀಮ ಕಂಟ್ರ್ಯಾಕ್ಟರ್, ಫಹೀಮ್ ಕಂಟ್ರ್ಯಾಕ್ಟರ್, ಜೈಲಾನಿ ಸುದರ್ಜಿ, ರಾಜು ಯಲಕಪಾಟಿ, ಮಂಗಳಾ ರವಳಪ್ಪನವರ ಮುಂತಾದವರು ಉಪಸ್ಥಿತರಿದ್ದರು.

Kshetra Samachara

Kshetra Samachara

11 days ago

Cinque Terre

11.2 K

Cinque Terre

0