ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಪೊಲೀಸ್ ಪಾಟೀಲ

ಧಾರವಾಡ: ರಾಜ್ಯದ ಅತ್ಯಂತ ಹಳೆಯ ವಕೀಲರ ಸಂಘಗಳಲ್ಲಿ ಒಂದಾದ ಧಾರವಾಡ ವಕೀಲರ ಸಂಘದ ಚುನಾವಣೆ ಡಿ.24 ರಂದು ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾದ ಸಿ.ಎಸ್.ಪೊಲೀಸ್ ಪಾಟೀಲ ಸ್ಪರ್ಧಿಸಿದ್ದಾರೆ. ಈ ಹಿಂದೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಪೊಲೀಸ್ ಪಾಟೀಲ ಅವರು ಚುನಾವಣಾ ಕಣಕ್ಕಿಳಿದಿದ್ದು, ಮೂವರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಇದರಲ್ಲಿ ಪೊಲೀಸ್ ಪಾಟೀಲ ಅವರು ಗೆಲುವಿನ ಮುಂಚೂಣಿಯಲ್ಲಿದ್ದು, ಅನೇಕ ವಕೀಲರು ಪೊಲೀಸ್ ಪಾಟೀಲ ಅವರಿಗೆ ಜೈ ಎಂದಿದ್ದಾರೆ. ಈ ಹಿಂದೆ ಇವರು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದೆ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ವಕೀಲರಿಗಾಗಿ ತರುವ ಯೋಜನೆಗಳ ಬಗ್ಗೆ ಸ್ವತಃ ಸಿ.ಎಸ್.ಪೊಲೀಸ್ ಪಾಟೀಲ ಅವರೇ ಹೇಳಿದ್ದಾರೆ ಕೇಳಿ.

ಕೇಳಿದ್ರಲ್ಲ.. ಇವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದೇ ಆದಲ್ಲಿ ವಕೀಲರ ಹಿತ ಕಾಯುವ ಭರವಸೆ ನೀಡಿದ್ದಾರೆ. ಇವರ ವಿರುದ್ಧ ಸ್ಪರ್ಧೆ ನಡೆಸುತ್ತಿರುವ ಇನ್ನಿಬ್ಬರು ಅಭ್ಯರ್ಥಿಗಳು ಈಗಾಗಲೇ ಸಂಘದ ಅಧ್ಯಕ್ಷರಾಗಿ ಹೋಗಿದ್ದಾರೆ. ಸದ್ಯ ಹಲವು ವಕೀಲರು ಹೊಸ ಮುಖಕ್ಕೆ ಮಣೆ ಹಾಕಲು ಸಜ್ಜಾಗಿದ್ದಾರೆ.

ಒಟ್ಟಾರೆಯಾಗಿ ಪೊಲೀಸ್ ಪಾಟೀಲ ಅವರ ಸ್ಪರ್ಧೆಯಿಂದ ವಕೀಲರ ಸಂಘದ ಚುನಾವಣಾ ಕಣ ರಂಗು ಪಡೆದುಕೊಂಡಿದ್ದು, ಅನೇಕ ವಕೀಲರು ಪೊಲೀಸ್ ಪಾಟೀಲರ ಬೆಂಬಲಕ್ಕೆ ನಿಂತಿದ್ದಾರೆ. ಈ ಚುನಾವಣೆಯಲ್ಲಿ ಪೊಲೀಸ್ ಪಾಟೀಲರಿಗೆ ಗೆಲುವು ಲಭಿಸಲಿ ಎಂಬುದೇ ನಮ್ಮ ಹಾರೈಕೆ.

Edited By : Manjunath H D
Kshetra Samachara

Kshetra Samachara

23/12/2021 08:21 pm

Cinque Terre

54.63 K

Cinque Terre

1

ಸಂಬಂಧಿತ ಸುದ್ದಿ