ಧಾರವಾಡ: ಹುಬ್ಬಳ್ಳಿ, ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಅಕ್ರಮ ಲೇಔಟ್‌ಗಳ ಬಗ್ಗೆ ಶಾಸಕ ಅಮೃತ ದೇಸಾಯಿ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಮಾತನಾಡಿ ಗಮನಸೆಳೆದಿದ್ದರು. ಅಕ್ರಮ ಲೇಔಟ್ ಮಾಡುವವರು ರೌಡಿಶೀಟರ್‌ಗಳೇ ಆಗಿದ್ದಾರೆ. ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಹೇಳಿದ್ದರು. ಇದೀಗ ಅವರ ಹೆಸರಿನಲ್ಲೇ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಅಕ್ರಮ ಲೇಔಟ್ ಇದೆ ಎಂಬ ವಿಷಯ ಕೇಳಿ ಬಂದಿದೆ.
ಧಾರವಾಡದ ಮಟ್ಟಿ ಪ್ಲಾಟ್‌ನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಲೇಔಟ್‌ಗಳನ್ನು ಹುಡಾ ಅಧಿಕಾರಿಗಳು ತೆರವು ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಶಾಸಕ ಅಮೃತ ದೇಸಾಯಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಶಾಸಕ ಅಮೃತ ಅವರು ಉದ್ದೇಶಪೂರ್ವಕವಾಗಿಯೇ ಈ ಲೇಔಟ್ ತೆರವುಗೊಳಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಶಾಸಕರ ಹೆಸರಿನಲ್ಲೇ ಗರಗದಲ್ಲಿ ಅಮೃತ ಬಡಾವಣೆ ಎಂಬ ಅಕ್ರಮ ಲೇಔಟ್ ಇದೆ. ಅದರ ಬಗ್ಗೆ ಶಾಸಕರು ಮಾತನಾಡಬೇಕು. ಸದ್ಯ ತೆರವುಗೊಳಿಸುತ್ತಿರುವ ಲೇಔಟ್ ಮಾಲೀಕರು ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಈ ಲೇಔಟ್ ಬಗ್ಗೆ ನಾನು ಬಡವರ ಪರವಾಗಿ ಹೋರಾಟ ಮಾಡಿದ್ದೆ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಶಾಸಕರು ಈ ಲೇಔಟ್ ತೆರವುಗೊಳಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪವನ್ನು ಬಸವರಾಜ ಕೊರವರ ಮಾಡಿದ್ದಾರೆ.
Kshetra Samachara
30/09/2021 03:51 pm