ಹುಬ್ಬಳ್ಳಿ- ರಾಜ್ಯದಲ್ಲಿ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ಕಾನೂನು ಜಾರಿಗೆ ಮುಂದಾಗುತ್ತಿದ್ದರೇ, ಇತ್ತ ಕೇಂದ್ರ ಸಚಿವರಿಂದಲೇ ಕೋರೋನಾ ನಿಯಮ ಉಲ್ಲಂಘನೆಯಾಗುತ್ತಿದ್ದರು ಸಹಿತ, ಸ್ಥಳೀಯ ಜಿಲ್ಲಾಡಳಿತ ಕಣ್ಣಿದ್ದು ಕುರುಡಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ.
ಹೌದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸಲು ದಿನಕ್ಕೊಂದು ಕಠಿಣ ಕಾನೂನು ಜಾರಿ ಮಾಡುತ್ತಿದೆ, ಇತ್ತ ಗಣೇಶ ಹಬ್ಬಕ್ಕೂ ಕೋವಿಡ್ ನೆಪ ಹೇಳಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಿರ್ಭಂದ ಹೇರಲಾಗಿದೆ. ಇನ್ನು ಸಭೆ, ಸಮಾರಂಭ, ಮದುವೆಗಳಿಗೆ ಇಂತಿಷ್ಟೇ ಜನರು ಸೇರಿಕೊಂಡು ಸರಳವಾಗಿ ಆಚರಣೆ ಅವಕಾಶ ಮಾಡಿಕೊಟ್ಟಿದೆ. ಆದರೆ ಕೇಂದ್ರ ಸಚಿವರೊಬ್ಬರು ಆಡಂಬರದ ಮದುವೆ ಜೊತೆಗೆ ಗಣ್ಯಾತೀಗಣ್ಯರು ಸೇರಿದಂತೆ ನೂರಾರು ಜನರು ಮದುವೆಗೆ ಆಗಮಿಸಿ, ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ಮದುವೆ ಮಾಡುತ್ತಿದ್ದರೇ, ಇತ್ತ ಜಿಲ್ಲಾಡಳಿತ ಮಾತ್ರ ಜಾಣ ಮೌನ ವಹಿಸುತ್ತಿರುವುದು ಜನರ ಕಂಗೇಣಿಗೆ ಗುರಿ ಆಗಿದೆ.
ಈ ಹಿಂದೆ ಜಿಲ್ಲಾಧಿಕಾರಿಗಳೇ ಅರ್ಬನ್ ಓಯಾಸಿಸ್ ಶಾಪಿಂಗ್ ಮಾಲ್ ನಲ್ಲಿ ದಂಪತಿಗಳಿಬ್ಬರು ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ, ಅವರ ಮೇಲೆ ದರ್ಪ ತೋರಿದರು, ಪೈನ್ ತುಂಬಿಸಿದ ಮೇಲೆಯೇ ಅವರನ್ನು ಸ್ಥಳದಿಂದ ಕಳಿಸಿದರು. ಆದರೆ ಇದೀಗ ಕೋವಿಡ್ ನಿಯಮವನ್ನೇ ಗಾಳಿಗೆ ತೂರಿದರು ಸಹಿತ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ಮಾಧ್ಯಮದವರು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಿದರೇ, ಈ ಬಗ್ಗೆ ತುಟಿ ಬಿಚ್ಚದೇ ಇರುವುದು ನೋಡಿದರೇ ಕಾನೂನುಗಳು ಕೇವಲ ಬಡವರಿಗೆ ಮಾತ್ರ,, ಶ್ರೀಮಂತರಿಗೆ ಅನ್ವಯಿಸುವುದಿಲ್ಲ ಎಂಬುದು ಮತ್ತೊಂದು ಸಾಭೀತಾಗಿದೆ.
Kshetra Samachara
02/09/2021 08:20 pm