ಧಾರವಾಡ: ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲೇ ಹೆಚ್ಚು ಕ್ರಷರ್ ಘಟಕಗಳಿದ್ದು, ಆ ಘಟಕಗಳ ಮಾಲೀಕರೊಂದಿಗೆ ಶೀಘ್ರ ಸಭೆ ಮಾಡುತ್ತೇನೆ ಎಂದು ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲೇ ಸ್ಪೋಟಕ ಪತ್ತೆಯಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಈ ಹಿಂದೆಯೇ ಸುರಕ್ಷತಾ ಕ್ರಮಗಳ ಬಗ್ಗೆ ಕ್ರಷರ ಘಟಕಗಳ ಮಾಲೀಕರಿಗೆ ಹೇಳಿದ್ದೇವೆ. ಜಿಲೆಟಿನ್ ಇಡಬೇಡಿ ಎಂದೂ ಹೇಳಿದ್ದೇವೆ. ಸರ್ಕಾರದ ನಿಯಮಾವಳಿಗಳ ಕಟ್ಟು ನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
Kshetra Samachara
23/01/2021 06:51 pm