ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಡಿ ಸಿಬಿಐನಿಂದ ಬಂಧಿತರಾಗಿ ಸೆರೆವಾಸ ಅನುಭವಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜೈಲಿನಿಂದ ಮುಕ್ತಿ ಸಿಗದಂತಾಗಿದೆ.
ಇಂದು ಧಾರವಾಡ ಹೈಕೋರ್ಟ್ ನಲ್ಲಿ ವಿನಯ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು.
ಇಂದು ಸಿಬಿಐ ಪರ ವಕೀಲರು ವಿನಯ್ ಗೆ ಯಾಕೆ ಜಾಮೀನು ನೀಡಬಾರದು ಎಂಬುದರ ಕುರಿತು ತಕರಾರು ಅರ್ಜಿ ಸಲ್ಲಿಸಿರುವುದರಿಂದ ವಿನಯ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೀಠ ಮುಂದಿನ ವಾರ ಮುಂದೂಡಿದೆ.
ವಿಚಾರಣೆ ದಿನಾಂಕವನ್ನು ಹೈಕೋರ್ಟ್ ಪೀಠ ಇನ್ನೂ ತಿಳಿಸಿಲ್ಲ. ಮುಂದಿನ ವಾರ ಜಾಮೀನು ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಇಂದಿನ ವಿಚಾರಣೆಯನ್ನು ಮುಂದೂಡಿದೆ.
Kshetra Samachara
06/01/2021 12:47 pm