ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 30 ಸಾವಿರ ಮಸೀದಿಗಳನ್ನು ಒಡೆದು ದೇವಸ್ಥಾನ ಕಟ್ಟಬೇಕಾಗುತ್ತದೆ: ಮುತಾಲಿಕ್ ಎಚ್ಚರಿಕೆ

ಧಾರವಾಡ: ಉತ್ತರ ಪ್ರದೇಶದ ಕಾಶಿಯ ಜ್ಞಾನವ್ಯಾಪಿ ಮಸೀದಿಯನ್ನು ಮುಸ್ಲಿಂರು ಶಾಂತಿಯಿಂದ ಬಿಟ್ಟುಕೊಡಬೇಕು ಇಲ್ಲದೇ ಹೋದರೆ 30 ಸಾವಿರ ಮಸೀದಿಗಳನ್ನು ಒಡೆದು ದೇವಸ್ಥಾನ ಕಟ್ಟಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಅದು ಜ್ಞಾನವ್ಯಾಪಿ ಮಸೀದಿ ಅಲ್ಲ. ಅದು ಜ್ಞಾನವ್ಯಾಪಿ ದೇವಸ್ಥಾನ. 12 ಜೋತಿರ್ಲಿಂಗಗಳಲ್ಲಿ ಅದೂ ಒಂದು ಪ್ರಮುಖ ಜೋತಿರ್ಲಿಂಗ. 1669 ರಲ್ಲಿ ಔರಂಗಜೇಬ್ ದಾಳಿ ಮಾಡಿ ದೇವಸ್ಥಾನವನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾನೆ. ಇದಕ್ಕೆ ಮುಖ್ಯ ಸಾಕ್ಷಿಯೇ ಆ ನಂದಿ. ಅಲ್ಲಿನ ಹೈಕೋರ್ಟ್ ವೀಡಿಯೋ ಮೂಲಕ ದಾಖಲೆ ಕಲೆ ಹಾಕಲು ಸೂಚನೆ ಕೊಟ್ಟಾಗ ಮುಸ್ಲಿಂರು ಇದಕ್ಕೆ ವಿರೋಧ ಮಾಡಿದ್ದಾರೆ. ವಿರೋಧ ಮಾಡಿದ್ದಾದರೂ ಏಕೆ? ಮಸೀದಿಯಲ್ಲಿ ತಲ್ವಾರ್, ಬಾಂಬ್‌ಗಳನ್ನಿಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಪ್ರೀತಿಯಿಂದ ಆ ಮಸೀದಿ ಬಿಟ್ಟುಕೊಡಬೇಕು. ಇಲ್ಲದೇ ಹೋದರೆ ಅಯೋಧ್ಯೆ ಮಾದರಿಯಲ್ಲಿ ಸಂಘರ್ಷ ಏರ್ಪಡುತ್ತದೆ. ನಾವು ಬಹಳಷ್ಟು ಕಳೆದುಕೊಂಡಿದ್ದೇವೆ. ಇನ್ನು ಕಳೆದುಕೊಂಡಿದ್ದನ್ನು ಮರಳಿ ಪಡೆದುಕೊಳ್ಳಬೇಕಾಗಿದೆ ಎಂದಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/05/2022 01:42 pm

Cinque Terre

70.22 K

Cinque Terre

22

ಸಂಬಂಧಿತ ಸುದ್ದಿ