ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: 24 ತಾಸು ವಿದ್ಯುತ್ ನೀಡಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ

ಕಲಘಟಗಿ: ಪಟ್ಟಣದ ಸುತ್ತಮುತ್ತಲಿನ ಹೊಲಗಳಲ್ಲಿ 24 ತಾಸು ಕರೆಂಟ್ ನೀಡಬೇಕು ಎಂದು ರೈತರು ಇಂದು ಕಲಘಟಗಿ ಪಟ್ಟಣದ ಹೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಈ ಮೊದಲು 24 ತಾಸು ಕರೆಂಟ್ ನೀಡಲಾಗುತ್ತಿತ್ತು. ಈಗ ಏಕಾಏಕಿ 7 ತಾಸು ಕರೆಂಟ್ ನೀಡುತ್ತಿದ್ದು ರೈತರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ದನಕರುಗಳಿಗೆ ರೋಗ ಹರಡುತ್ತಿದ್ದು ಮುನ್ನಚ್ಚೆರಿಕೆ ಕ್ರಮವಾಗಿ ಕೆರೆಯ ನೀರನ್ನು ಕೂಡಿಸಬಾರದು ಎಂದು ಸರಕಾರ ತಿಳಿಸಿದೆ. ಹೀಗಿರುವಾಗ ಈ ರೀತಿ ಕರೆಂಟ್ ತೆಗೆದರೆ ನಾವು ದನಕರುಗಳಿಗೆ ಯಾವ ನೀರು ಕೊಡಿಸಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ತಮಗೆ ನ್ಯಾಯ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ನಮಗೆ 24 ತಾಸು ವಿದ್ಯುತ್ ನೀಡಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಇದಕ್ಕಿಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಸಾಯಂಕಾಲದವರೆಗೂ ಕಚೇರಿ ಎದುರು ಕುಳಿತ ರೈತರು ತಡವಾಗಿ ಬಂದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ನಂತರ ಅಧಿಕಾರಿಗಳು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿರುವಾಗ ರೈತರು ಅಧಿಕಾರಿಗಳನ್ನು ಮನೆಗೆ ಬಿಡದೆ ಕಚೇರಿ ಗೇಟ್ ಹಾಕುವ ಮೂಲಕ ನಮಗೆ ನ್ಯಾಯ ಸಿಗುವವರೆಗೂ ನಿಮ್ಮನ್ನು ಮನೆಗೆ ಹೋಗಲು ಬಿಡುವುದಿಲ್ಲ ಎಂದು ಆಕ್ರೋಶಿತರಾಗಿದ್ದರು.

Edited By : Somashekar
Kshetra Samachara

Kshetra Samachara

28/09/2022 07:39 pm

Cinque Terre

35.79 K

Cinque Terre

1

ಸಂಬಂಧಿತ ಸುದ್ದಿ