ಹುಬ್ಬಳ್ಳಿ: ನಗರದ ಗಣೇಶೋತ್ಸವ ವಿಚಾರದ ಹಿನ್ನೆಲೆ, ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಮೀಷನ್‌ರೇಟ್ ಈದ್ಗಾ ಮೈದಾನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ..
ಕಳೆದ ಒಂದು ತಿಂಗಳಿನಿಂದ ಗಜಾನನ ಮಂಡಳಿ ಸೇರಿದಂತೆ ಹಲವಾರು ಹಿಂದೂಪರ ಸಂಘಟನೆಗಳು, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಬೇಕೆಂದು ಪಾಲಿಕೆಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೂಡ ಮಾಡಿದ್ದರು. ಆದ್ರೆ ಅನುಮತಿ ನೀಡಲು ಪಾಲಿಕೆ ಹಿಂಜರಿಯುತ್ತಿರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮೈದಾನ ಸುತ್ತೆಲ್ಲ ಫುಲ್ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
Kshetra Samachara
29/08/2022 01:18 pm