ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇದ್ದ ಬಸ್‌ಗಳು ಸಿದ್ದರಾಮೋತ್ಸವದತ್ತ ಪ್ರಯಾಣ: ಇತ್ತ ಪ್ರಯಾಣಿಕರ ಗತಿ ಅಧೋಗತಿ

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ದಾವಣಗೆರೆಯಲ್ಲಿ ನಡೆಯುತ್ತಿರುವ ಪ್ರತಿಪಕ್ಷ ನಾಯಕ, ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭಕ್ಕೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಎರವಲು ಸೇವೆಗೆ ನೀಡಿದ್ದಾರೆ. ಇದರಿಂದ ಇಂದು ನಗರ ಹಾಗೂ ಗ್ರಾಮೀಣ ಬಸ್ ಪ್ರಯಾಣಿಕರು ಸರಿಯಾದ ಬಸ್ಸುಗಳಿಲ್ಲದೆ ಪಡಿಪಾಟಿಲು ಅನುಭವಿಸಬೇಕಾಯಿತು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಹುಟ್ಟು ಹಬ್ಬ ಹಿನ್ನೆಲೆ, ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ 120 ಸಾರಿಗೆ ಬಸ್ಸುಗಳು ಹುಬ್ಬಳ್ಳಿ ಡಿಪೋದಿಂದ ತೆರಳಿವೆ. ಹೀಗಾಗಿ ವಿವಿಧೆಡೆ ಬಸ್ ಸಂಚಾರದಲ್ಲಿ ತುಂಬಾ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಸರಿಯಾದ ಸಮಯಕ್ಕೆ ತಮ್ಮ ಊರುಗಳಿಗೆ ತೆರಳಲು ಬಸ್‌ಗಳು ಸಿಗದೇ ತೊಂದರೆ ಅನುಭವಿಸುವಂತಾಗಿದೆ.

ಈಗಾಗಲೇ ಧಾರವಾಡ ವಿವಿಧ ಹಳ್ಳಿಗಳಿಂದ ಬಸ್ಸುಗಳು ದಾವಣಗೆರೆಯತ್ತ ಅಭಿಮಾನಿಗಳನ್ನ ಕರೆದುಕೊಂಡು ತೆರಳಿದೆ. ಸಮಾರಂಭದ ಆಯೋಜಕರು ಈ ಬಸ್​ಗಳನ್ನು ಗುತ್ತಿಗೆ ರೂಪದಲ್ಲಿ ಪಡೆದಿದ್ದು, ಇಂದು ರಾತ್ರಿ ವೇಳೆಗೆ ವಾಪಸ್​ ಆಗಲಿವೆ. ಹುಬ್ಬಳ್ಳಿ ಗ್ರಾಮಾಂತರ ಹಾಗೂ ನಗರ ಕೇಂದ್ರದಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಬಸ್ ಲಭ್ಯತೆ ಸಮರ್ಪಕವಾಗಿವಾಗಿಲ್ಲ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಪ್ರಯಾಣಕ್ಕೂ ತೊಂದರೆ ಆಗಿದೆ.

ಇನ್ನು ನಿನ್ನೆ ಮಧ್ಯಾಹ್ನವೇ ಬಹುತೇಕ ಬಸ್​​​ಗಳು ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದರಿಂದ, ಧಾರವಾಡದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್​ಗಳ ಕೊರತೆ ಎದುರಾಗಿತ್ತು. ಮಧ್ಯಾಹ್ನದ ನಂತರ ಹಲವೆಡೆ ಬಸ್ ಸಂಪರ್ಕ ಲಭಿಸಲಿಲ್ಲ. ಇದೇ ಸ್ಥಿತಿ ಇಂದು ಸಹ ಮುಂದುವರೆದಿದ್ದು, ಬಸ್​ಗಳನ್ನೇ ಅವಲಂಬಿತರಾದ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗಿದೆ...

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Somashekar
Kshetra Samachara

Kshetra Samachara

03/08/2022 03:45 pm

Cinque Terre

52.68 K

Cinque Terre

7

ಸಂಬಂಧಿತ ಸುದ್ದಿ