ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಮಾನ್ಯ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರ ಹೋದ ಮೇಯರ್

ಹುಬ್ಬಳ್ಳಿ: ಇಂದು ಹು-ಧಾ ಮಹಾನಗರ ಪಾಲಿಕೆಯ, ಸಾಮಾನ್ಯ ಸಭೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಮಹಾಪೌರರು ಹೊರ ನಡೆದ ಘಟನೆ ನಡೆಯಿತು.

ಹೌದು ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಹೆಚ್ಚಿನ ವಿಷಯಗಳನ್ನು ಕೈ ಬಿಡುವಂತೆ ವಿರೋಧ ಆಗ್ರಹಿಸಿ, ಮೇಯರ್ ಅವರ ಟೇಬಲ್ ಘೇರಾವ್ ಹಾಕಿದ ಸಂದರ್ಭದಲ್ಲಿ ಮಹಾಪೌರರು ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ಮೇಯರ್ ಅವರು ಕೇವಲ ತಮ್ಮ ಪಕ್ಷದ ಸದಸ್ಯರ ಸಮಸ್ಯೆಗಳನ್ನು ಅಷ್ಟೇ ಆಲಿಸುತ್ತಿದ್ದಾರೆ. ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರ ಸಮಸ್ಯೆ ಗಳನ್ನು ಆಲಿಸುತ್ತಿಲ್ಲವೆಂದು ಮೇಯರ್ ಟೇಬಲ್ ಗೆ ಘೇರಾವ್ ಹಾಕಿದ ಕೂಡಲೆ ಮಹಾಪೌರ ಈರೇಶ ಅಂಚಟಗೇರಿ ಸಾಮಾನ್ಯ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೋದರು. ಇದರಿಂದ ಕಾಂಗ್ರೆಸ್ ಸದಸ್ಯರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

Edited By : Somashekar
Kshetra Samachara

Kshetra Samachara

29/07/2022 07:42 pm

Cinque Terre

61.01 K

Cinque Terre

5

ಸಂಬಂಧಿತ ಸುದ್ದಿ