ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಜಲಜೀವನ್ ಮಿಷನ್ ಅಡಿಯಲ್ಲಿ ಅಕ್ರಮ ಆರೋಪ, ಕ್ರಮಕ್ಕೆ ಆಗ್ರಹ

ನವಲಗುಂದ: ನವಲಗುಂದ ತಾಲೂಕಿನ ಯಮನೂರ ಗ್ರಾಮ ಪಂಚಾಯತಿಯ ಕುಮಾರಗೊಪ್ಪ ಗ್ರಾಮದ ಹದ್ದಿನಲ್ಲಿ ಬರುವ 28 ಎಕರೆ 10 ಗುಂಟೆ ಖಾಸಗಿ ಲೇಔಟ್ ಅಧಿಕೃತವಾಗಿ ಅಭಿವೃದ್ಧಿ ಹೊಂದದೆ ಇದ್ದರೂ, ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪೈಪ್‌ ಲೈನ್ ಅಳವಡಿಸಲಾಗಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ನವಲಗುಂದ ಪಟ್ಟಣದ ಲಿಂಗರಾಜ ವೃತ್ತದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಕರುನಾಡ ವಿಜಯಸೇನೆ, ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 60 ಲಕ್ಷ ಅಕ್ರಮ ಹಾಗೂ ಕಳಪೆ ಕಾಮಗಾರಿ ಮಾಡಿರುವ ಹಿನ್ನೆಲೆ ಸಂಬಂಧ ಪಟ್ಟ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಖುಲ್ಲಾ ನಿವೇಶನದ ಜಾಗದಲ್ಲಿ ಬಿತ್ತನೆ ಮಾಡಲಾಗಿದ್ದು, ನಿವೇಶನ ಖರೀದಿ ಮಾಡಿದ ಎಲ್ಲರಿಗೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಅರುಣಕುಮಾರ, ರಾಜ್ಯ ಸಮಿತಿ ಶಿವು ಕಂಬಾರ , ಜಿಲ್ಲಾ ಯುವ ಘಟಕ ಅಧ್ಯಕ್ಷ ಕುಮಾರ ಲಕ್ಕಮ್ಮಣ್ಣವರ, ನಗರ ಅಧ್ಯಕ್ಷ ನಾಗರಾಜ ಕಾತರಾಳ, ನಾಗರಾಜ ಶಿಲ್ಲೆನ್ನವರ, ಶಿವಾಜಿ ಪವಾರ ಸೇರಿದಂತೆ ಹಲವಾರು ಇದ್ದರು.

Edited By : Somashekar
Kshetra Samachara

Kshetra Samachara

27/07/2022 02:30 pm

Cinque Terre

48.98 K

Cinque Terre

0

ಸಂಬಂಧಿತ ಸುದ್ದಿ