ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ತ್ಯಾಗ ಬಲಿದಾನಕ್ಕೆ ಸಾಕ್ಷಿ ನಮ್ಮ ಬಂಡಾಯದ ನಾಡು; ಇಲ್ಲಿದೆ ನೋಡಿ ಹಿನ್ನೆಲೆ?

ನವಲಗುಂದ: ಹೋರಾಟ, ಸ್ವಾಭಿಮಾನ, ಕೆಚ್ಚೆದೆ, ಹಕ್ಕು ಪಡೆಯುವ ಛಲ ಇದಕ್ಕೆಲ್ಲ ಒಂದೇ ಮಾತಿನಲ್ಲಿ ಹೇಳೋದಾದ್ರೆ ಕಳಸಾ-ಬಂಡೂರಿ ಹಾಗೂ ಮಹದಾಯಿ ಕಿಚ್ಚು ಎಂದರೆ ತಪ್ಪಾಗದು. ದೇಶದ ಭೂಪುಟದಲ್ಲಿ ರೈತರ ಚಳುವಳಿಗೆ ಪ್ರೇರಣೆಯಾಗಿ ನಿಲ್ಲುವಂತಹ ಹೋರಾಟದ ಸ್ಥಳ ಅದು ನವಲಗುಂದ-ನರಗುಂದ ಹೋರಾಟ.

ಕಳಸಾ-ಬಂಡೂರಿಯ ಹೋರಾಟದ ಸಮಯವಂತೂ ಮತ್ತೇ 1980ರ ಬಂಡಾಯವನ್ನು ನೆನಪಿಸುವಂತೆ ಮಾಡಿದೆ. 1979ರಲ್ಲಿ ಬರಗಾಲ ಬಿದ್ದಾಗ ಕಾಲುವೆಗಳಿಂದ ರೈತರ ಹೋಲಗಳಿಗೆ ನೀರು ಬರುವುದು ನಿಂತು ಹೋಯಿತು. ಇದರಿಂದ ರೈತರು ಕಂಗಾಲಾಗಿ ಹೋಗಿದ್ದರು. ಬ್ಯಾಂಕ್‌ಗಳಿಂದ ಮಾಡಿದ ಸಾಲ ತೀರಿಸಲಾಗದೇ ದಿವಾಳಿಯಾಗುವಂತಹ ಪರಿಸ್ಥಿತಿಗೆ ಬಂದು ನಿಂತಿತ್ತು.

ಇಷ್ಟೇಲ್ಲಾ ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದರೂ ನೀರಿನ ಕರ ಮತ್ತು ಬೆಟರ್‍ಮೆಂಟ್ ಲೇವಿ ಜಾರಿಯಲ್ಲಿತ್ತು. ಇದಕ್ಕೆ ಕಂಗೆಟ್ಟ ನವಲಗುಂದ, ನರಗುಂದ ಮತ್ತು ಸವದತ್ತಿಯ ರೈತರು ಹೋರಾಟಕ್ಕೆ ತಯಾರಾಗುವಂತಹ ಲಕ್ಷಣಗಳು ಗೋಚರಿಸತೊಡಗಿದವು. 1979ರ ಡಿಸೆಂಬರ್‌ ತಿಂಗಳಲ್ಲಿ ಈ ಹೋರಾಟ ಬಯಲಿಗೆ ಬಂದಿತು. ಇದರ ನೇತೃತ್ವವನ್ನು ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿಯನ್ನು ವಹಿಸಿಕೂಂಡಿತು.

ಇವರು ನೀರಿನ ಕರ ಮತ್ತು ಬೆಟರ್‍ಮೆಂಟ್ ಲೇವಿ ರದ್ದು ಮಾಡಬೇಕು ಎಂಬ ಹಲವು ಬೇಡಿಕೆಗಳಿಗಾಗಿ ಹೋರಾಟವನ್ನು ಆರಂಭಿಸಿದರು. ಹೋರಾಟ ತೀವ್ರವಾಯಿತು, ಸುಮಾರು 6 ತಿಂಗಳುಗಳ ಕಾಲ ನಡೆದಂತಹ ಹೋರಾಟಕ್ಕೆ ಸರ್ಕಾರ ಬಗ್ಗಲಿಲ್ಲ. ಯಾವ ಪ್ರತಿಭಟನೆಗೂ ಸರ್ಕಾರ ಜಗ್ಗದೆಯಿದ್ದಾಗ 1980 ಜುಲೈ 21ರಂದು ನರಗುಂದ-ನವಲಗುಂದ ಹಾಗೂ ಸವದತ್ತಿ ತಾಲೂಕ ಬಂದ್‌ಗೆ ಕರೆ ನೀಡಿದ್ದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನರು ಹೋರಾಟದ ಕೇಂದ್ರಗಳಿಗೆ ಬಂದಿದ್ದರು.

ನಂತರ ನಡೆದಿದ್ದು, ಇಡೀ ರಾಷ್ಟ್ರವೇ ಬಂಡಾಯದ ನಾಡಿನತ್ತ ತಿರುಗಿ ನೋಡುವಂತಹ ಘಟನೆಗಳು. ಈ ದುರಂತದಲ್ಲಿ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಸಪ್ಪ ಲಕ್ಕುಂಡಿ ಹಾಗೂ ನರಗುಂದ ತಾಲೂಕಿನ ಈರಪ್ಪ ಕಡ್ಲಿಕೂಪ್ಪರಿಗೆ ಗುಂಡೇಟು ಬಿದ್ದು ಸಾವನ್ನಪ್ಪಿದರು. ಹೀಗಾಗಿ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿನ ಸ್ಮಾರಕವನ್ನು ನವಲಗುಂದ ಪಟ್ಟಣದ ರೈತ ಭವನದ ಬಳಿಯೇ ನಿರ್ಮಿಸಲಾಗಿದ್ದು, ಪ್ರತಿವರ್ಷ ಜುಲೈ 21ಕ್ಕೆ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Somashekar
Kshetra Samachara

Kshetra Samachara

20/07/2022 06:25 pm

Cinque Terre

26.11 K

Cinque Terre

1

ಸಂಬಂಧಿತ ಸುದ್ದಿ