ಹುಬ್ಬಳ್ಳಿ : ಇನ್ಮುಂದೆ ಖಾತೆಗೆ ಕನ್ನ ಹಾಕಿ ಹಣ ಎಗರಿಸುವ ಸೈಬರ್ ಅಪರಾಧಗಳು ಕಡಿಮೆಯಾಗುತ್ತವೆ. ಹಣ ಕಳೆದುಕೊಂಡ 20 ನಿಮಿಷದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ( FSL Lab ) ಆರಂಭವಾಗಿದೆ.
ಹೌದು ಇಂದು ಹುಬ್ಬಳ್ಳಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸೈಬರ್ ಕೇಸ್ ಗೆ ಸಂಬಂಧಪಟ್ಟಂತೆ ಈ ಮೊದಲು ಹೈದ್ರಾಬಾದ್ ಗೆ ಹೋಗಬೇಕಿತ್ತು ಇನ್ಮುಂದೆ ಆ ಕೆಲಸ ಹುಬ್ಬಳ್ಳಿಯಿಂದ ಆರಂಭವಾಗುತ್ತದೆ ಎಂದರು.
ಅಪರಾಧ ಶೋಧನೆಯಲ್ಲಿ FSL ಮಹತ್ವದ ಘಟ್ಟ. ಕೋರ್ಟ್ ಗಳಲ್ಲಿ ಮಾನ್ಯತೆ ಬೇಕಾದ್ರೆ FSL ವರದಿ ಬೇಕು. ಕೇವಲ ಬೆಂಗಳೂರಿನಲ್ಲಿ ಈ ಕೇಂದ್ರ ಇತ್ತು. ವರದಿ ಬರಲು ಮೂರು ತಿಂಗಳು ಆಗುತ್ತಿದೆ.
ಬ್ಯಾಂಕಿಂಗ್ ಮೋಸ ಬಹಳ ಆಗುತ್ತಿದೆ. ಜಾರ್ಖಂಡ್ ನ ಒಂದು ಹಳ್ಳಿ ಸೈಬರ್ ಕ್ರೈಂಗೆ ಕುಖ್ಯಾತಿ ಪಡೆದಿದೆ. ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ. DNA, Cyber, Mobile, audio, Video ಸೆಕ್ಷನ್ ಇರಲಿಲ್ಲ. ಅವೆಲ್ಲಾ ಇಲ್ಲಿ ಕಾರ್ಯ ನಿರ್ವಹಿಸುತ್ತದೆ. ನಾರ್ಕೋಟಿಕ್ ಸೆಕ್ಷನ್ ಕೂಡಾ,ಕೆಲವೇ ದಿನಗಳಲ್ಲಿ ಅದನ್ನ ಕೂಡಾ ಮಾಡುತ್ತೇವೆ. ಅತೀ ಹೆಚ್ಚು ಕ್ರೈಂಗಳನ್ನ ನಮ್ಮ ಪೊಲೀಸರು ಶೋಧಿಸುತ್ತಿದ್ದಾರೆ. ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಜೆಟ್ ನಲ್ಲಿ ನೀಡಿದ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಮುಗಿಸುತ್ತೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಈ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/03/2022 05:12 pm