ಹುಬ್ಬಳ್ಳಿ: ಅದು ಬಹು ವಿವಾದಿತ ಪ್ರದೇಶ. ಅಲ್ಲಿ ರಾಷ್ಟ್ರ ಧ್ವಜ ಹಾರಿಸಲು ದೊಡ್ಡ ಹೋರಾಟವೇ ನಡೆದಿತ್ತು. ರಾಷ್ಟ್ರೀಯ ನಾಯಕರೆಲ್ಲ ಆ ಜಾಗಕ್ಕಾಗಿ ದೊಡ್ಡ ಹೋರಾಟವನ್ನೇ ನಡೆಸಿದ್ದರು. ಇನ್ನೇನು ಅದು ತಣ್ಣಗಾಯಿತು ಅಂತಿದ್ದ ಸಮಯದಲ್ಲಿ ಮತ್ತೊಂದು ವಿವಾದ ತಲೆದೋರಿದೆ. ಅಷ್ಟಕ್ಕೂ ಆ ಪ್ರದೇಶ ಯಾವುದು? ಈಗ ತಲೆದೋರಿರುವ ಸಮಸ್ಯೆ ಏನು ಎಂಬುದನ್ನು ನೀವೇ ನೋಡಿ...
ಹಲವು ವರ್ಷಗಳ ಕಾಲ ಉತ್ತರ ಕರ್ನಾಟಕದಲ್ಲಿ ಕಿಚ್ಚು ಹಚ್ಚಿದ್ದ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಾಟದ ವಿಚಾರ ಈಗ ತಣ್ಣಗಾಗಿದೆ. ಆದ್ರೆ ಈಗ ಈದ್ಗಾ ಮೈದಾನ ಇನ್ನೊಂದು ಕಾರಣದಿಂದ ದೇಶಾದ್ಯಂತ ಸುದ್ದಿಯಾಗಿದೆ. ಕಳೆದ ಒಂದು ತಿಂಗಳಿಂದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಲು ಅವಕಾಶ ನೀಡುವಂತೆ ಹೋರಾಟ ನಡೆಯುತ್ತಿದೆ.. ಇನ್ನು ಈ ಕುರಿತು ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಯಿತು.
ಸುದೀರ್ಘ ಚರ್ಚೆ ನಂತರ ಐದು ಜನ ಪಾಲಿಕೆ ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಲಾಯಿತು. ಇದರಲ್ಲಿ ಆಡಳಿತ ಪಕ್ಷದ 3 ಜನ, ವಿರೋಧ ಪಕ್ಷದ ಇಬ್ಬರು ಸದಸ್ಯರು ಇರ್ತಾರೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಈ ಸಮಿತಿ ವರದಿ ನೀಡಬೇಕು. ಈ ಸಮಿತಿ ಏನು ವರದಿ ಕೊಡುತ್ತದೆಯೋ ಅದೇ ಅಂತಿಮವಾಗಿರುತ್ತೆ ಎಂದು ಮೇಯರ್ ಈರೇಶ ಅಂಚಟಗೇರಿ ಆದೇಶ ಮಾಡಿದ್ರು.
ಒಟ್ಟಿನಲ್ಲಿ ಇಷ್ಟು ದಿನ ತಣ್ಣಗಿದ್ದ ಅವಳಿ ನಗರದ ಜನರಿಗೆ ಈದ್ಗಾ ವಿವಾದ ಮತ್ತೆ ತಲೆ ನೋವು ತರಿಸಿದೆ. ಮಹಾನಗರ ಪಾಲಿಕೆ ಯಾವ ರೀತಿ ಈ ಜಟಿಲ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂಬುದನ್ನು ಸೋಮವಾರದವರೆಗೆ ಕಾದು ನೋಡಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/08/2022 10:46 pm